Breaking Newsಇತರ ಕ್ರೀಡೆಕ್ರೀಡೆ

Volleyball: ಏಷ್ಯಾ ವಾಲಿಬಾಲ್: ಭಾರತಕ್ಕೆ ಮೂರನೇ ಸೋಲು

ಟೋಕಿಯೋ : ಆತಿಥೇಯ ಜಪಾನ್ ವಿರುದ್ಧ ನಡೆದ ಪಂದ್ಯದಲ್ಲಿ 0-3 ಸೆಟ್ ಗಳ ಅಂತರದಲ್ಲಿ ಸೋಲನುಭವಿಸಿದ ಭಾರತ ಇಲ್ಲಿ ನಡೆಯುತ್ತಿರುವ 21ನೇ ಏಷ್ಯಾ ವಾಲಿಬಾಲ್ ಚಾಂಪಿಯನ್ಷಿಪ್ ನಲ್ಲಿ ಮೂರನೇ ಸೋಲು ದಾಖಲಿಸಿತು.

ಪಾಸಿಂಗ್ ವಿಭಾಗದಲ್ಲಿ ಹಲವಾರು ಪ್ರಮಾದಗಳನ್ನು ಎಸಗಿದ ಭಾರತ 25-15, 21-15, 22-18 ಅಂತರದಲ್ಲಿ ಸೋಲನುಭವಿಸಿತು. ಚಿಬಾ ಪೋರ್ಟ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಜಪಾನ್ ತಂಡದ ನಾಯಕ ಯುಕಿ ಇಶಿಕವಾ ಮತ್ತು ಕೆಂಟೋ ಮಿಯಾವುರ ಅನುಕ್ರಮವಾಗಿ 18 ಮತ್ತು 17 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಜಯದೊಂದಿಗೆ ಜಪಾನ್ ಎ ಗುಂಪಿನಲ್ಲಿ ಅಗ್ರ ಸ್ಥಾನಕ್ಕೇರಿತು. ಹಿಂದಿನ ಪಂದ್ಯಗಳಲ್ಲಿ ಭಾರತ ತಂಡ ಕತಾರ್ ಹಾಗೂ ಬಹ್ರೇನ್ ವಿರುದ್ಧ ಸೋತಿತ್ತು

Spread the love

Related Articles

Leave a Reply

Your email address will not be published. Required fields are marked *

Back to top button