Breaking Newsಕ್ರಿಕೆಟ್ಕ್ರೀಡೆ

IND vs ENG, 4th Test: ಇಂಗ್ಲೆಂಡ್ ಗೆ 368 ರನ್ ಗುರಿ

ಓವಲ್ : ಭಾರತ ದ್ವಿತೀಯ ಇನ್ನಿಂಗ್ಸ್ ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುವುದರೊಂದಿಗೆ ನಾಲ್ಕನೇ ಟೆಸ್ಟ್ ನಲ್ಲಿ ಇಂಗ್ಲೆಡ್ ಗೆ ಜಯ ಗಳಿಸಲು 368 ರನ್ ಗಳ ಕಠಿಣ ಗುರಿಯನ್ನು ನೀಡಿದೆ.

ಇಂಗ್ಲೆಂಡ್ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 77 ರನ್ ಗಳಿಸಿದ್ದು, ಅಂತಿಮ ದಿನದಲ್ಲಿ 291 ರನ್ ಗಳಿಸಬೇಕಾಗಿದೆ. ರೋಹಿತ್ ಶರ್ಮಾ (127), ಕೆ.ಎಲ್.ರಾಹುಲ್ (46), ಚೇತೇಶ್ವರ ಪೂಜಾರ (61), ವಿರಾಟ್ ಕೊಹ್ಲಿ (44), ರಿಶಬ್ ಪಂತ್ (50) ಹಾಗೂ ಶಾರ್ದೂಲ್ ಠಾಕೂರ್ (60) ರನ್ ಗಳಿಸುವುದರೊಂದಿಗೆ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ 466 ರನ್ ಗಳಿಸಿತ್ತು.

ಇಂಗ್ಲೆಂಡ್ ಪರ ಮೊಯಿನ್ ಅಲಿ (118) ಮತ್ತು ಓಲ್ಲೇ ರಾಬಿನ್ಸನ್ (105) ತಮ್ಮ ಬೌಲಿಂಗ್ ನಲ್ಲಿ ಶತಕ ರನ್ ನೀಡಿದರು. ಇಂಗ್ಲೆಂಡ್ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ದಿಟ್ಟ ಆರಂಭ ಕಂಡಿದೆ. ರಾಯ್ ಬರ್ನ್ಸ್ (31) ಮತ್ತು ಹಸೀಬ್ ಹಮೀದ್ (43) ಜವಾಬ್ದಾರಿಯುತ ಆಟ ಪ್ರದರ್ಶಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button