ಇತರ ಕ್ರೀಡೆಕ್ರೀಡೆ
ಕಂಚಿನ ಪದಕ ಹಿಂದಿರುಗಿಸಿದ ವಿನೋದ್ ಕುಮಾರ್

ಟೋಕಿಯೋ : ಅಂಗವೈಕಲ್ಯದ ವರ್ಗೀಕರಣದಲ್ಲಿ ಅನರ್ಹತೆ ಕಂಡು ಬಂದ ಹಿನ್ನಲೆಯಲ್ಲಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ವಿನೋದ್ ಕುಮಾರ್ ಪದಕವನ್ನು ಹಿಂದಿರುಗಿಸಿದ್ದಾರೆ.
F52 ವಿಭಾಗದಲ್ಲಿ ವಿನೋದ್ ಕುಮಾರ್ ಸ್ಪರ್ಧಿಸಿದ್ದರು. ಆದರೆ ಅವರು ಈ ವಿಭಾಗದಲ್ಲಿ ಸ್ಪರ್ಧಿಸಿರುವುದನ್ನು ಕೆಲವು ಸ್ಪರ್ಧಿಗಳು ಪ್ರಶ್ನಿಸಿರುವ ಹಿನ್ನೆಲೆಯಲ್ಲಿ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ಲಾಸಿಫಿಕೇಷನ್ ನಿಯೋಗ ವಿಚಾರಣೆ ಮಾಡಿದೆ. ಇದರಿಂದಾಗಿ ವಿನೋದ್ ಅವರು ಗೆದ್ದ ಪದಕವನ್ನು ಹಿಂಪಡೆಯಲಾಗಿದೆ.




