ಸಚಿವ ಮುರುಗೇಶ್ ನಿರಾಣಿ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಕೊರೊನಾ ರೂಲ್ಸ್ ಬ್ರೇಕ್!!

ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ ತಮ್ಮ ಹುಟ್ಟು ಆಚರಣೆ ವೇಳೆ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ಸರ್ಕಾರದ ನಿಯಮ ಪಾಲಿಸಬೇಕಾದ ಸಚಿವರೇ ರೂಲ್ಸ್ ಬ್ರೇಕ್ ಮಾಡಿದರೆ ಜನ ಸಾಮಾನ್ಯರಿಗೊಂದು ಕಾನೂನು, ಜನಪ್ರತಿನಿಧಿಗಳಿಗೊಂದು ಕಾನೂನು ಎನ್ನುವಂತಾಗಿದೆ.
ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಮುರುಗೇಶ್ ನಿರಾಣಿ ಕೋವಿಡ್ ಅಭಿಮಾನಿ ಬಳಗದಿಂದ ಹುಟ್ಟು ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೂರನೇಯ ಅಲೆಯ ಭೀತಿಯ ಮಧ್ಯೆಯೂ ಬೃಹತ್ ಜನಸಮೂಹ ಸೇರಿದ್ದರು. ಸಚಿವ ಮುರುಗೇಶ್ ನಿರಾಣಿಯವರಿಂದಲೇ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ಒಬ್ಬರೂ ಮಾಸ್ಕ್ ಹಾಕಿಲ್ಲ, ಸಾಮಾಜಿಕ ಅಂತರ ಇಲ್ಲವೇ ಇಲ್ಲ. ಸಭೆ, ಸಮಾರಂಭಗಳಲ್ಲಿ ಹೆಚ್ಚಿನ ಜನರಿರಬಾರದೆಂಬ ಕಾನೂನು ಇದ್ರೂ, ನಿಯಮ ಉಲ್ಲಂಘನೆ ಮಾಡಲಾಗಿದೆ. ಸ್ವತಃ ಸಚಿವ ಮುರುಗೇಶ್ ನಿರಾಣಿಯವರೇ ಮಾಸ್ಕ್ ಧರಿಸಿಲ್ಲ. ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಂದ ನಿರಾಣಿ ಅವರಿಗೆ ಹೂ ಮಳೆ. ಅಭಿಮಾನಿಗಳು ಕ್ರೇನ್ ಮೂಲಕ ಸಚಿವ ಮುರುಗೇಶ್ ನಿರಾಣಿಗೆ ಬೃಹತ್ ಸೇಬು ಹಾರ ಹೂಮಳೆಗೈದಿದ್ದಾರೆ.
ಬಳಿಕ ಕಾರ್ಯಕ್ರಮದಲ್ಲಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ರೈತ ಕುಟುಂಬದಿಂದ ಬಂದವನಾಗಿದ್ದು, ರೈತರ ಆಶೀರ್ವಾದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ಅಮೀತ್ ಷಾ ನಿರಾಣಿ ಉದ್ಯಮಿ ಸಮೂಹ ಸಂಸ್ಥೆಯ ಖಾಸಗಿ ಕಾರ್ಖಾನೆಗೆ ಭೇಟಿ ನೀಡಿದ್ದು ಮೊದಲನೆಯದ್ದು, ಏಷ್ಯಾದದಲ್ಲಿ ಅತೀ ಹೆಚ್ಚು ಇಥೆನಾಲ್ ಉತ್ಪಾದನೆ ಘಟಕ ಹೊಂದಿದೆ. ಈಗಾಗಲೇ ಸಕ್ಕರೆ ಕಾರ್ಖಾನೆ, ಸಿಮೆಂಟ್ ಫ್ಯಾಕ್ಟರಿ, ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ನಿರಾಣಿ ಉದ್ಯಮ ಸಂಸ್ಥೆ ಜನಪರ ಕಾರ್ಯ ಮಾಡುತ್ತಿದೆ. ಬರುವ 20 ವರ್ಷಗಳಲ್ಲಿ 100 ಕಾರ್ಖಾನೆ ಹೊಂದುವ ಗುರಿಯಿದೆ. ಆ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದರು.
ಇನ್ನು ಬೀಳಗಿ ಮತಕ್ಷೇತ್ರದಲ್ಲಿ 3ಸಾವಿರ ಹೆಕ್ಟೇರ್ ನೀರಾವರಿ ಮಾಡುವ ಮೂಲಕ ಸಂಪೂರ್ಣ ನೀರಾವರಿ ಕ್ಷೇತ್ರ ರೂಪಿಸಲಾಗುವುದು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾದಿಯಲ್ಲೇ ನಡೆಯುತ್ತಿದ್ದು, ಪ್ರತಿಯೊಬ್ಬರು ಅವರ ಹಾದಿಯಲ್ಲೇ ನಡೆದರೆ ಪ್ರತಿ ಹಳ್ಳಿಯೂ ಅಭಿವೃದ್ಧಿ ಆಗಲಿದೆ. ನಾನು ಇಷ್ಟು ಎತ್ತರಕ್ಕೆ ಬೆಳೆಯಲು ನಿಮ್ಮೆಲ್ಲರ ಆಶೀರ್ವಾದ ಕಾರಣ. ಉನ್ನತ ಹುದ್ದೆಯವರೆಗೆ ಮುಟ್ಟುವಂತೆ ಬೆಳೆದಿದ್ದೇನೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಹುದ್ದೆ ಪ್ರಯತ್ನವನ್ನು ಬಿಚ್ಚಿಟ್ಟರು.




