ಇತರ ಕ್ರೀಡೆಕ್ರೀಡೆ
ಕುಸ್ತಿ: ಬಜರಂಗ್ ಪೂನಿಯಾಗೆ ಸೋಲು, ಕಂಚಿಗಾಗಿ ಫೈಟ್

ಟೋಕಿಯೋ: ಅಜರ್ಬೈಜಾನಿನ ಹಾಜಿ ಅಲಿಯೆವ್ ವಿರುದ್ಧ 5-12 ಅಂತರದಲ್ಲಿ ಸೋಲನುಭವಿಸಿ ಭಾರತದ ಬಜರಂಗ್ ಪೂನಿಯ ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಫೈನಲ್ ತಲುಪಲು ವಿಫಲರಾಗಿದ್ದಾರೆ. ಆದರೆ ಕಂಚಿಗಾಗಿ ಮುಂದಿನ ಹೋರಾಟ ಮುಂದುವರಿಸಿದ್ದಾರೆ.
ಭಾರತಕ್ಕೆ ಚಿನ್ನದ ಪದಕದ ಭರವಸೆ ಮೂಡಿಸಿದ್ದ ಬಜರಂಗ್ ಆರಂದಲ್ಲೇ ಅಂಕಗಳಿಸಿದರೂ ನಂತರ ಹಾಜಿ ಬಂಧದಲ್ಲಿ ಸಿಲುಕಿ ಸುಲಭವಾಗಿ ಅಂಕ ನೀಡಿದರು.
20 ಕಿಮೀ ರೇಸ್ ವಾಕ್ ನಲ್ಲಿ ಭಾರತದ ಪ್ರಿಯಾಂಕ ಗೋಸ್ವಾಮಿ ಮತ್ತು ಭಾವನಾ ಜಾಟ್ ಅನುಕ್ರಮವಾಗಿ 17 ಮತ್ತು 32ನೇ ಸ್ಥಾನ ಗಳಿಸಿದ್ದಾರೆ.




