ಇತರ ಕ್ರೀಡೆಕ್ರೀಡೆವಿದೇಶಸುದ್ದಿ
ಅಫ್ಘಾನಿಸ್ತಾನ: ವಿಮಾನದಿಂದ ಬಿದ್ದು ಸತ್ತವರಲ್ಲಿ ಯುವ ಫುಟ್ಬಾಲ್ ಆಟಗಾರ

ಕಾಬೂಲ್ : ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಕೂಡಲೇ ದೇಶವನ್ನು ತೊರೆದು ಹೋಗುವ ತರಾತುರಿಯಲ್ಲಿ ವಿಮಾನವನ್ನೇರಿ ಅಲ್ಲಿಂದ ಜಾರಿ ಬಿದ್ದು ಸಾವನ್ನಪ್ಪಿದವರಲ್ಲಿ ಅಫ್ಘಾನಿಸ್ತಾನದ ರಾಷ್ಟ್ರೀಯ ಯುವ ಫುಟ್ಬಾಲ್ ತಂಡದ ಆಟಗಾರ ಜಾಕಿರ್ ಅನ್ವಾರಿ ಸೇರಿದ್ದಾನೆಂದು ತಿಳಿದು ಬಂದಿದೆ.
ಚಲಿಸುತ್ತಿರುವ ವಿಮಾನವನ್ನೇರಿಯು ಯತ್ನಿಸಿ, ಅದು ಟೇಕ್ ಆಫ್ ಆದ ಕೆಲ ಹೊತ್ತಿನಲ್ಲೇ ನಾಲ್ಕೈದು ಜನರು ಕೆಳಕ್ಕೆ ಬಿದ್ದು ಸಾವನ್ನಪ್ಪಿದ ಸುದ್ದಿ ವರದಿಯಾಗಿತ್ತು. ಅವರಲ್ಲಿ ಜಾಕೀರ್ ಕೂಡ ಒಬ್ಬರು ಎಂದು ಅಫ್ಘಾನಿಸ್ತಾನದ ಸುದ್ದಿ ಸಂಸ್ಥೆ ಅರಿಯಾನ ಖಚಿತಪಡಿಸಿದೆ.
ಯುಎಸ್ಎಎಫ್ ಬೋಯಿಂಗ್ ಸಿ.17 ಭಾನುವಾರ ದೇಶ ತೊರೆದು ಹೋಗುತ್ತಿರುವ ಅಫ್ಘಾನ್ ನಾಗರಿಕರಿಗೆ ನೆರವು ನೀಡಿತ್ತು. ಕೆಲವರು ವಿಮಾನದ ಟಯರ್ ಹಾಗೂ ರೆಕ್ಕೆ ಹಿಡಿದು ಪ್ರಯಾಣಿಸಲು ಯತ್ನಿಸಿದ್ದರು.




