ಆ ಗ್ರಾಮದ ಹೆಸರು ಕೇಳಿದ್ರೆ ಬೆಚ್ಚಿಬೀಳ್ತೀರಾ: ಒಳ ಹೋದ್ರೆ ವಾಪಸ್ ಬರೋದು ಗ್ಯಾರಂಟಿ ಇಲ್ಲ!

8 ನೇ ಶತಮಾನದಲ್ಲಿ ಆಧುನಿಕತೆಗೆ ಮಾದರಿಯಾಗಿದ್ದ ಗ್ರಾಮದಲ್ಲೀಗ ಒಬ್ಬ ಮನುಷ್ಯನು ವಾಸಿಸುವುದಿಲ್ಲ. ಇಡೀ ಗ್ರಾಮವೇ ಪಾಳುಬಿದ್ದಿದೆ. ಈ ಗ್ರಾಮದ ಹೆಸರು ಕೇಳಿದ್ರೆ ಇಡೀ ರಾಜಸ್ತಾನವೇ ಬೆಚ್ಚಿಬೀಳುತ್ತೆ. ರಾತ್ರಿ ಹೊತ್ತಲ್ಲಿ ಈ ಗ್ರಾಮಕ್ಕೆ ಹೋದವರು ತಿರುಗಿ ಬಂದ ಮಾತೇ ಇಲ್ಲ. ಹಲವು ಭಯಾನಕ ಸಂಗತಿಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿರುವ ಈ ಗ್ರಾಮವೇ ರಾಜಸ್ತಾನದ ಕುಲಧಾರ.
ಸುಮಾರು 18 ನೇ ಶತಮಾನ (1762 ರಿಂದ 1820 )ರ ಕಾಲದಲ್ಲಿ ಜೈಸಲ್ ಮೇರ್ ನಲ್ಲಿ ಮಹಾರಾವಲ್ 2ನೇ ಮೂಲ್ ರಾಜ್ ಸಿಂಗ್ ಆಡಳಿತ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಅವರ ಮಂತ್ರಿಯಾಗಿದ್ದ ಜ್ಸಾಲೀಂ ಸಿಂಗ್ ಪಾಪಕೃತ್ಯದಿಂದಾಗಿ ಈ ಕುಲಧಾರ ಗ್ರಾಮಕ್ಕೆ ಗ್ರಾಮವೇ ಬರಿದಾಗಿ ಹೋಗಿದೆ.
ಮಹಾಮಂತ್ರಿಯಾಗಿದ್ದ ಜ್ಸಾಲೀಂ ಸಿಂಗ್ ಪ್ರಜೆಗಳಿಗೆ ಹಿಂಸೆ ನೀಡುತ್ತಿದ್ದ, ಅಲ್ಲದೇ ಸುಂದರ ಯುವತಿಯರು ಈ ಜ್ಸಾಲೀಂ ಸಿಂಗ್ ನ ಕಣ್ಣಿಗೆ ಬಿದ್ದರಂತೂ ಮುಗಿದೇ ಹೋಯ್ತು. ನಂತರ ಆ ಯುವತಿಯ ಪರಿವಾರವೇ ಬಂದು ಜ್ಸಾಲೀಂ ಸಿಂಗ್ ಬಳಿ ಹುಡುಗಿಯನ್ನು ಒಪ್ಪಿಸಿ ಹಿಂತಿರುಗಬೇಕು. ಇಲ್ಲವಾದ್ರೆ ಆ ಯುವತಿಯ ಪರಿವಾರವೇ ರಾತ್ರೋರಾತ್ರೀ ಆ ಊರನ್ನೇ ಖಾಲಿ ಮಾಡಬೇಕಾದ ಪರಿಸ್ಥಿತಿಯಿತ್ತು.

ಹೀಗಿರುವಾಗ ಒಂದು ದಿನ ಕುಲಧಾರ ಗ್ರಾಮದ ಮುಖ್ಯಸ್ಥನ ಸುಂದರ ಮಗಳು ಜ್ಸಾಲೀಂ ಸಿಂಗ್ ಕಣ್ಣಿಗೆ ಬೀಳುತ್ತಾಳೆ. ನಂತರ ಮಂತ್ರಿಯ ಕಾಟ ತಾಳಲಾರದೆ ಕುಲಧಾರ ಮುಖ್ಯಸ್ಥನ ಕುಟುಂಬ ಹಾಗೂ ಅಲ್ಲಿನ ಇಡೀ ಗ್ರಾಮದ ಜನರೆಲ್ಲರು ಈ ಮಂತ್ರಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಗ್ರಾಮವನ್ನೇ ತೊರೆಯುವ ನಿರ್ಧಾರವನ್ನು ಮಾಡಿದರು.
ಒಂದು ದಿನ ರಾತ್ರಿ ಇಡೀ ಕುಲಧಾರ ಗ್ರಾಮವೇ ಕಣ್ಣೀರು ಇಡುತ್ತಾ ಮಂತ್ರಿ ಜ್ಸಾಲೀಂ ಸಿಂಗ್ ಗೆ ಹಿಡಿ ಶಾಪ ಹಾಕುತ್ತಾ ಅತ್ತು ಕರೆದು ಅಲ್ಲಿನ ಗ್ರಾಮ ದೇವತೆಯನ್ನು ನೆನೆದು ಸುರಂಗ ಮಾರ್ಗದ ಮೂಲಕ ಊರು ತೊರೆಯಲು ನಿರ್ಧಾರ ಮಾಡಿ ಅರ್ಧ ಸುರಂಗದಲ್ಲಿ ಇರುವಾಗಲೇ ಭೂಕಂಪ ಸಂಭವಿಸುತ್ತದೆ. ಈ ಸುರಂಗದೊಳಗೆ ಇದ್ದ ಜನರೆಲ್ಲ ಮೃತಪಡುತ್ತಾರೆ.
ಅಂದು ಮೃತಪಟ್ಟ ಜನರು ಇಂದು ಕುಲಧಾರದಲ್ಲಿ ಆತ್ಮಗಳಾಗಿ ಸಂಚರಿಸುತ್ತಿದ್ದಾರೆ. ಗೆಜ್ಜೆ ಶಬ್ಧ, ಚೀರಾಟ, ನರಳಾಟ ಇದೇ ಜನರ ಕೂಗೂ ಇಂದಿಗೂ ಅಲ್ಲಿ ಕೇಳುತ್ತದೆ ಅನ್ನುವುದು ಅಲ್ಲಿನ ಆಸುಪಾಸಿನ ಗ್ರಾಮದ ಜನರ ನಂಬಿಕೆ. ಈ ಭೂತ ಪ್ರೇತದ ವಿಚಾರದ ಬಗ್ಗೆ ಸತ್ಯಂಶ ತಿಳಿಯಲು ಒಂದು ಯುವಕರ ತಂಡ ಕುಲಧಾರದಲ್ಲಿ ಒಂದು ರಾತ್ರಿ ಉಳಿಯಲು ಹಾಗೂ ನೆಗೆಟಿವ್ ಎನರ್ಜಿ ಡಿಟೆಕ್ಟರ್ ರಿಂದ ಪತ್ತೆ ಹಚ್ಚಲು ಸಿದ್ಧವಾಯಿತು.
ಈ ತಂಡದ ಹಲವು ಸದಸ್ಯರಿಗೆ ಚಿತ್ರ ವಿಚಿತ್ರ ಸಂಗತಿಗಳು ಎದುರಾದವು. ರಾತ್ರಿ ಗೆಜ್ಜೆಯ ಶಬ್ಧ ಕೇಳಿತು. ಅಲ್ಲದೇ ಹೆಂಗಸರು ಮಕ್ಕಳ ಒಡಾಟವನ್ನು ಈ ತಂಡದ ಕೆಲ ಸದಸ್ಯರು ಕಂಡಂತೆ ಆಯಿತು. ಅಲ್ಲದೇ ನಮ್ಮನ್ನು ಯಾರೋ ಹಿಂಬಾಲಿಸಿದ ರೀತಿ ಅನಿಸಿತು. ನಮ್ಮ ಭುಜದ ಮೇಲೆ ಕೈ ಇಟ್ಟಂತೆ ಹಾಗೂ ವಿಚಿತ್ರ ನರಳಾಟಗಳು ಇಲ್ಲಿ ತೋರಿ ಬಂತು ಎಂದು ಈ ತಂಡದ ಸದಸ್ಯರು ತಿಳಿಸಿದರು. ಅಲ್ಲದೇ ಇಲ್ಲಿ ನೆಗೆಟಿವ್ ಎನರ್ಜಿ ಇರುವುದು ಅವರ ಉಪಕರಣದ ಮೂಲಕ ಸತ್ಯ ಎಂದು ತಿಳಿದು ಬಂದಿದೆ.
–ರಮೇಶ್, ಹಿರಿಯ ಕಾರ್ಯಕ್ರಮ ನಿರ್ಮಾಪಕ, 24×7 ಲೈವ್ ಕನ್ನಡ



