ಸ್ಪೆಷಲ್ ಸ್ಟೋರೀಸ್

ಅಣ್ಣ ಮುಖ್ಯಮಂತ್ರಿ-ತಂಗಿ ಚಿಲ್ಲರೆ ವ್ಯಾಪಾರಿ!

ಎರಡನೇ ಬಾರಿಗೆ ಉತ್ತರ ಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಯೋಗಿ ಆದಿತ್ಯನಾಥ್. ಚುನಾವಣೆ ಪ್ರಕ್ರಿಯೆ ಮುಗಿದು ಎರಡನೇ ಬಾರಿಗೆ ಬಹುಮತದಿಂದ ಜಯಭೇರಿಗಳಿಸಿರುವ ಬಿಜೆಪಿ ಈ ಬಾರಿಯೂ ಮುಖ್ಯಮಂತ್ರಿ ಗದ್ದುಗೆ ಮೇಲೆ ಯೋಗಿ ಆದಿತ್ಯನಾಥರನ್ನೇ ಕೂರಿಸಿದೆ.

ಅದರಲ್ಲೂ ದೇಶದ ಪ್ರಮುಖ ರಾಜ್ಯ ಉತ್ತರ ಪ್ರದೇಶಕ್ಕೆ ಮುಖ್ಯಮಂತ್ರಿಯಾಗಿರುವ ಯೋಗಿ ಅದಿತ್ಯನಾಥ್ ಮೊದಲ ಬಾರಿ ಗದ್ದುಗೆಗೆ ಕೂತಾಗಲೇ ತಾವೇನು ಅನ್ನುವುದನ್ನ ನಿರೂಪಿಸಿದ್ದಾರೆ.  ಇದೀಗ ಎರಡನೇ ಬಾರಿಗೂ ಭಾರಿ ಬಹುಮತದಿಂದ ಆಯ್ಕೆಯಾಗಿ ಮತ್ತೊಂದು ಸುತ್ತಿಗೆ ಸರ್ಕಾರ ರಚನೆ ಮಾಡಿದ್ದಾರೆ.

ಈ ನಡುವೆ ಯೋಗಿ ಆದಿತ್ಯನಾಥ್ ವಿಚಾರದಲ್ಲಿ ಇನ್ನೊಂದು ವಿಶೇಷ ಸಂಗತಿ ಎಂದರೆ, ಅವರು ಮುಖ್ಯಮಂತ್ರಿಯಾಗಿದ್ದರೂ ಅವರ ಸಹೋದರಿ ಶಶಿ ದೇವಿ ಋಷಿಕೇಶದಲ್ಲಿ ಹೂವಿನ ವ್ಯಾಪಾರ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ ಅನ್ನೋದೇ ವಿಶೇಷ.

ಯೋಗಿ ಆದಿತ್ಯನಾಥ್ ಸಹೋದರಿ ಶಶಿದೇವಿ

ಹೌದು, ಸಣ್ಣ ಪುಟ್ಟ ರಾಜಕಾರಣಿಯಾದ್ರೂ ಸಾಕು ಅವರ ಗತ್ತು ಗೈರತ್ತು ಬದಲಾಗೋ ಈ ಕಾಲದಲ್ಲೂ ಯೋಗಿ ಆದಿತ್ಯನಾಥರ ಅಕ್ಕ ಹೂ ಮಾರಿ ಜೀವನ ಸಾಗಿಸೋದಲ್ಲದೆ ಸಣ್ಣದೊಂದು ಚಹಾ ಅಂಗಡಿಯನ್ನೂ ನಡೆಸುತ್ತಿದ್ದಾರೆ. ಸಣ್ಣಪುಟ್ಟ ರಾಜಕಾರಣಿ ಆದಲ್ಲಿಯೇ ಅವರ ಇಡೀ ಕುಟುಂಬ ಅದರ ಲಾಭ ಪಡೆದುಕೊಳ್ಳುವುದು ಒಂದೆಡೆಯಾಗಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರೂ ಯೋಗಿ ಆದಿತ್ಯನಾಥ್ ಅವರ ಸಹೋದರಿ ಹೂವಿನ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿರುವುದು ವಿಶೇಷವೇ ಸರಿ.

Spread the love

Related Articles

Leave a Reply

Your email address will not be published. Required fields are marked *

Back to top button