Breaking NewsLatestರಾಜಕೀಯ

ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವರೇ ?

ವರದಿ : ದಯಾಶಂಕರ ಮೈಲಿ

ಮೈಸೂರು : ಕಾಂಗ್ರೆಸ್ ಹಿರಿಯ ಮುಖಂಡರೂ, ರಾಜ್ಯದ ವಿರೋಧಪಕ್ಷದ ನಾಯಕರು ಆಗಿರುವ ಸಿದ್ದರಾಮಯ್ಯನವರು ತಮಗೆ ರಾಜಕೀಯ ಜನ್ಮ ನೀಡಿದ ಮೈಸೂರಿನ ಶ್ರೀ ಚಾಮುಂಡಿಕ್ಷೇತ್ರದಿಂದ ಮುಂದೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವರೇ ?. ಎಂಬ ಪ್ರಶ್ನೆಯ ಆಧಾರದ ಮೇಲೆ ರಾಜಕೀಯ ವಲಯದಲ್ಲಿ ತೀವ್ರವಾಗಿ ಚರ್ಚೆ ನಡೆಯುತ್ತಿದೆ.

ಸದ್ಯದ ರಾಜಕೀಯ ಸ್ಥಿತಿಗತಿಯನ್ನು ಅವಲೋಕನ ಮಾಡಿದರೇ ಸಿದ್ದರಾಮಯ್ಯನವರು ಈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳು ಕಂಡು ಬರುತ್ತಿಲ್ಲ. ಹಾಲಿ ಸಿಎಂ ಆಗಿದ್ದಾಗಲೇ ಇದೇ ಕ್ಷೇತ್ರದಿಂದ ಸ್ಪರ್ಧಿಸಿ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರು. ಇದು ಅವರ ಮಾನಸದಿಂದ ಹೋಗಿಲ್ಲ. ಹಚ್ಚ ಹಸಿರಿರಾಗಿ ಉಳಿದಿದೆ. ಈಗಲೂ ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ಸ್ಮರಿಸಿಕೊಳ್ಳುವುದು ಉಂಟು.

ಏಕೆ ನಿಲ್ಲುವುದಿಲ್ಲ :

ಹಿಂದಿನಂತೆ ಚಾಮುಂಡೇಶ್ಲರಿ ಕ್ಷೇತ್ರ ಉಳಿದಿಲ್ಲ.1983 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಕ್ಕಡಿ ಗುರುತಿನಿಂದ ಪಕ್ಷೇತರರಾಗಿ ಗೆಲ್ಲುವ ಮೂಲಕ ವಿಧಾನಸೌಧದ ಮೆಟ್ಟಿಲುಗಳನ್ನು ಹತ್ತಿದ ಸಿದ್ದರಾಮಯ್ಯನವರ ರಾಜಕೀಯ ಓಟ ನಿರೀಕ್ಷೆಗಿಂತಲೂ ಹೆಚ್ಚಿನ ರೀತಿಯಲ್ಲಿ ನಡೆಯಿತು. ಇದಕ್ಕೆ ಕಾರಣ ಅವರ ಜಾತ್ಯತೀತ ನಿಲುವು ಮತ್ತು ನೇರ, ನಡೆ ,ನುಡಿ. ಅಂದು ಅವರ ಸುತ್ತಲೂ ಇದ್ದದ್ದು ವಕ್ಕಲಿಗ ಮುಖಂಡರೇ. ಇಂದು ಬೇರೆ ಪಕ್ಷಗಳಿಗೆ ಹಾರಿ ಹೋಗಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ, ಸಿ. ಬಸವೇಗೌಡ ಮತ್ತಿತರ ನಾಯಕರೇ ಸಿದ್ದರಾಮಯ್ಯನವರ ರಾಜಕೀಯ ನಡೆಗೆ ಹೆಜ್ಜೆ ಹಾಕುತ್ತಿದ್ದರು.

ಆದರಿಂದು ಸಿದ್ದರಾಮಯ್ಯನವರ ಹಿಂದೆ ಒಕ್ಕಲಿಗರ ಮತ ತರುವಂತ ಒಕ್ಕಲಿಗ ನಾಯಕರು ಇಲ್ಲ. ಕಾಲ ಕ್ರಮೇಣ ಸಿದ್ದರಾಮಯ್ಯನವರು ತಮ್ಮ ಸ್ವಜಾತಿಯವರಿಗೇ ಹೆಚ್ಚಿನ ಮನ್ನಣೆ ನೀಡಿಲಾರಂಭಿಸಿದರು. ಈ ಕಾರಣಕ್ಕೇನೆ ಆನೇಕ ಒಕ್ಕಲಿಗರು ಅವರಿಂದ ದೂರ ಸರಿದರು ಎಂದು ಹೇಳಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯನವರು ಮಗದೊಮ್ಮೆ ನಾನೇ ಸಿಎಂ ಎಂದು ಹೇಳಿದ್ದು ಮತ್ತು ಒಂದು ಕಾಲಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಆತ್ಯಾಪ್ತರಾಗಿಗ್ಗ ಜಮೀರ್ ಅವರು ಮುಂದಿನ ಸಿಎಂ ಸಿದ್ದರಾಮಯ್ಯನವರೇ ಎಂದು ಹೇಳಿದ್ದು ದಲಿತ ಸಮಾಜ ಅಸಮಾಧಾನಗೊಳ್ಳುವಂತೆ ಮಾಡಿದೆ.. ಈ ಕಾರಣಕ್ಕೆ ಮೈಸೂರು ಜಿಲ್ಲೆಯ ದಲಿತ ಮುಖಂಡರು, ಡಾ.ಜಿ.ಪರಮೇಶ್ವರ್ ಅವರು ಮೈಸೂರಿಗೆ ಬಂದಿದ್ದಾಗ ಮುಂದಿನ ಪರಮೇಶ್ವರ್ ಎಂದು ಘೋಷಣೆ ಕೂಗಿದ್ದು ಉಂಟು.

ಏತನ್ಮಧ್ಯೆ, ನಾಯಕರು, ಲಿಂಗಾಯಿತರು ಕಾಂಗ್ರೆಸ್ ಕಡೆಗೆ ಒಲವು ತೋರುವುದು ಹಿಂದಿನಿಂದಲೂ ಕಂಡುಬಂದಿಲ್ಲ. ಹೀಗೆ ಚಾಮುಂಡೇಶ್ಲವರಿ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಮುದಾಯಗಳು ಕಾಂಗ್ರೆಸಿಗಿಂತಲೂ ಹೆಚ್ಚಾಗಿ ಸಿದ್ದರಾಮಯ್ಯವರಿಗೆ ಮತ ಹಾಕುವುದು ತೀರ ಕಡಿಮೆಯೇ ಎಂಬ ಮಾತುಗಳು ಕ್ಷೇತ್ರ ವ್ಯಾಪ್ತಿ ಬಲವಾಗಿ ಕೇಳಿ ಬರುತ್ತಿದೆ.

ಮತ್ತೆಲ್ಲಿಂದ ಸ್ಪರ್ಧೆ ?

ಹೀಗೆ ಚಾಮುಂಡೇಶ್ಲರಿ ತಮಗೆ ಪೂರಕವಾಗಿ ಇಲ್ಲ ಎಂಬ ಕಾರಣದಿಂದ ಸಿದ್ದರಾಮಯ್ಯನವರು ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಇರುವ ಚಾಮರಾಜಪೇಟೆ ಅಥವಾ ಮತ್ತೆ ಬಾದಾಮಿಯಿಂದ ಬಹುತೇಕ ಸ್ಪರ್ಧಿಸುವುದು ಖಚಿತ ಎಂದು ಕಾಂಗ್ರೆಸ್ ವಲಯದಲ್ಲೇ ಖಚಿತವಾಗಿ ಹೇಳಲಾಗುತ್ತಿದೆ.

ಚಾಮುಂಡಿಯಿಂದ ಮತ್ಯಾರು ?

ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಏನು ಬೇಕಾದರೂ ನಡೆಯುತ್ತದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. 2018 ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕಣಕ್ಕೆ ಇಳಿದು ಸಿದ್ದರಾಮಯ್ಯನವರು ಸೋಲಿಸಿದ್ದ ಮಾಜಿ ಸಚಿವ ಜಿ.ಟಿ.ದೇವೇಗೌಡರೇ ಕಾಂಗ್ರೆಸ್ ನಿಂದ ಕಣಕ್ಕೆ ಇಳಿದರೂ ಆಶ್ಚರ್ಯ ಪಡಬೇಕಿಲ್ಲ. ಮಾಜಿ ಪ್ರಧಾನಿ ದೇವೇಗೌಡರೇ ಖುದ್ದು ಮಾತನಾಡಿ, ಪಕ್ಷ ಬಿಡುವುದು ಬೇಡ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರವನ್ನು ಒಗ್ಗಟ್ಟಿನಿಂದ ಹೋರಾಟ ಮಾಡಿ ತರೋಣ, ಫಾಸ್ಚ್ ಈಸ್ ಫಾಸ್ಚ್. ಫರಗೆಟ್ ಈಟ್ ಎಂದು ಹೇಳಿದ್ದರೂ ಜಿ.ಟಿ.ದೇವೇಗೌಡರು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸುವ ಮಾತುಗಳನ್ನು ಬಹಿರಂಗವಾಗಿ ಹೇಳಿದ್ದಾರೆ.

ಈಗಾಗಲೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ತಿಳಿದಂತೆ ಇರುವ ಜಿ.ಟಿ.ದೇವೇಗೌಡರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಡನೆ ಕಾಂಗ್ರೆಸ್ ಸೇರ್ಪಡೆ ಆಗುವ ಬಗ್ಗೆ ಒಂದು ಸುತ್ತಿನ ಮಾತು ಕತೆ ನಡೆಸಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ಒಂದು ವೇಳೆ ಜಿಟಿಡಿ ಕಾಂಗ್ರೆಸ್ ನಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕೆ ಇಳಿದರೇ ಕುರುಬ ಸಮುದಾಯ ಅವರನ್ನು ಅಖಂಡವಾಗಿ ಬೆಂಬಲಿಸುತ್ತದೆ ಎಂಬುದನ್ನು ಹೇಳಲಿಕ್ಕೆ ಆಗದು. ಈ ಸೂಕ್ಷ್ಮತೆಯನ್ನು ಅರಿತಿರುವ ಜಿಟಿಡಿ ತಮ್ಮ ರಾಜಕೀಯ ಪಟ್ಟುಗಳನ್ನು ಉರುಳಿಸುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button