ಅಭಿಮತಲೇಖನಗಳು

ಎಪ್ರಿಲ್ 3: ಇಮ್ರಾನ್​ಖಾನ್​​ಗೆ ಅಗ್ನಿಪರೀಕ್ಷೆಯ ದಿನ!

ಅವಿಶ್ವಾಸ ಮತಕ್ಕೆ ಮುನ್ನ ಆಡಳಿತ ಒಕ್ಕೂಟವನ್ನು ತೊರೆಯುವ ಕೆಲವು ಮಿತ್ರಪಕ್ಷಗಳೊಂದಿಗೆ ಇಮ್ರಾನ್​ಖಾನ್ ಹೆಚ್ಚುತ್ತಿರುವ ಒತ್ತಡವನ್ನು ಎದುರಿಸುತ್ತಿದ್ದರೂ, ಪಾಕಿಸ್ತಾನದ ಪ್ರಧಾನಿ ರಾಜೀನಾಮೆ ನೀಡುವುದಿಲ್ಲ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಮಂಗಳವಾರ ಹೇಳಿದ್ದಾರೆ.

“ಪ್ರಧಾನಿ ಇಮ್ರಾನ್​ಖಾನ್ ಕೊನೆಯ ಎಸೆತದವರೆಗೂ ಹೋರಾಡುವ ಆಟಗಾರ, ಅವರು ರಾಜೀನಾಮೆ ನೀಡುವುದಿಲ್ಲ” ಎಂದು ಫವಾದ್ ಚೌಧುರಿ ಉರ್ದುವಿನಲ್ಲಿ ಟ್ವೀಟ್ ಮಾಡಿದ್ದಾರೆ.

ಇಮ್ರಾನ್​ಖಾನ್ ಅನಿಶ್ಚಿತ ಸ್ಥಿತಿಯಲ್ಲಿದ್ದಾರೆ. ಎಪ್ರಿಲ್ 3ರಂದು ಅವಿಶ್ವಾಸ ನಿರ್ಣಯದ ಮೇಲಿನ ಮತದಾನವನ್ನು ನಿರೀಕ್ಷಿಸಲಾಗಿದೆ. ಆಡಳಿತ ನಡೆಸುತ್ತಿರುವ ಇಮ್ರಾನ್ ಪಕ್ಷ PTI ಪಕ್ಷಕ್ಕೆ ಮುಖ್ಯವಾಗಿ ಬೆಂಬಲ ನೀಡಿದ್ದ MQM-P ಪಕ್ಷ ಬೆಂಬಲ ಹಿಂದೆಗೆದುಕೊಂಡು ವಿಪಕ್ಷ ಸೇರಿರುವುದು ದೊಡ್ಡ ಹೊಡೆತ ನೀಡಿದೆ.

ಭಾನುವಾರ ನಡೆದ ಶಕ್ತಿ ಪ್ರದರ್ಶನದ ರ್ಯಾಲಿಯಲ್ಲಿ ಇಮ್ರಾನ್​ಖಾನ್ ಪತ್ರವೊಂದನ್ನು ಬಹಿರಂಗಪಡಿಸಿದರು. ಆ ಪತ್ರ ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಾಹ್ಯ ದೇಶಗಳೊಂದಿಗೆ ಕೆಲವು ಶಕ್ತಿಗಳು ಸಂಚು ನಡೆಸಿರುವುದನ್ನು ಬಹಿರಂಗಪಡಿಸುತ್ತದೆ ಎಂದು ಅವರು ಆರೋಪಿಸಿದರು. ಈ ಪತ್ರವನ್ನು ಹಿರಿಯ ಪತ್ರಕರ್ತರು ಹಾಗೂ ಪ್ರಮುಖ ಮಿತ್ರರೊಂದಿಗೆ ಹಂಚಿಕೊಳ್ಳುವುದಾಗಿ ಇಮ್ರಾನ್​ಖಾನ್ ಈ ಸಮಯದಲ್ಲಿ ಘೋಷಿಸಿದರು.

ಪಾಕಿಸ್ತಾನಿ ರಾಷ್ಟ್ರೀಯ ಅಸೆಂಬ್ಲಿಯು ಒಟ್ಟು 342 ಸದಸ್ಯ ಬಲವನ್ನು ಹೊಂದಿದ್ದು, ಸರಳ ಬಹುಮತಕ್ಕಾಗಿ 172 ಸದಸ್ಯರು ಬೇಕಾಗುತ್ತಾರೆ. PTI ನೇತೃತ್ವದ ಒಕ್ಕೂಟವು 179 ಸದಸ್ಯರ ಬೆಂಬಲದೊಂದಿಗೆ ರಚನೆಯಾಗಿತ್ತು. ಇಮ್ರಾನ್​ಖಾನ್ ಅವರ PTI 155 ಸದಸ್ಯರನ್ನು ಹೊಂದಿದ್ದರೆ, ಬಲೂಚಿಸ್ತಾನ್ ಅವಾಮಿ ಪಕ್ಷ ಸೇರಿದಂತೆ ಇತರ ಪ್ರಮುಖ ಮಿತ್ರಪಕ್ಷಗಳು ಜೊತೆಗಿವೆ. ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್ 20 ಸ್ಥಾನಗಳನ್ನು ಹೊಂದಿದೆ.  

PTI ನ ನಾಲ್ಕು ಮಿತ್ರಪಕ್ಷಗಳಲ್ಲಿ ಮೂರು ಪಕ್ಷಗಳಾದ MQM-P, PML-Q ಮತ್ತು BAP ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ತಮ್ಮ ಬೆಂಬಲವನ್ನು ಸೂಚಿಸಿವೆ ಮತ್ತು ಅದಕ್ಕೆ ಅನುಗುಣವಾಗಿ ಮತ ಚಲಾಯಿಸುವುದಾಗಿ ಹೇಳಿರುವುದರಿಂದ ಇಮ್ರಾನ್​ಖಾನ್ ಪರಿಸ್ಥಿತಿ ಅನಿಶ್ಚಿತವಾಗಿದೆ.

ಪಾಕಿಸ್ತಾನದ ವಿರೋಧ ಪಕ್ಷಗಳು 162 ಸದಸ್ಯ ಬಲವನ್ನು ಹೊಂದಿವೆ ಮತ್ತು ಮತದಾನದ ಸಮಯದಲ್ಲಿ ಮೂರು ಆಡಳಿತ ಸಮ್ಮಿಶ್ರ ಪಕ್ಷಗಳು ಸೇರಿಕೊಳ್ಳುವ ನಿರೀಕ್ಷೆಯಿದೆ. ಹೀಗಾದರೆ ವಿರೋಧಪಕ್ಷಕ್ಕೆ ಬಹುಮತವು ದೊರಕುತ್ತದೆ. ವಿಪಕ್ಷವು ತನ್ನ 161 ಸದಸ್ಯರ ಬೆಂಬಲದೊಂದಿಗೆ ಮಾರ್ಚ್​ 28ರಂದು ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು.

ಇದೀಗ ಬಂದಿರುವ ಬಹುಮುಖ್ಯ ಬ್ರೇಕಿಂಗ್ ನ್ಯೂಸ್ ಪ್ರಕಾರ MQM-P ಇಮ್ರಾನ್​ಖಾನ್ ಪಕ್ಷಕ್ಕೆ ಬೆಂಬಲಿಸುವುದಾಗಿ ಹೇಳಿದೆ. ಆದರೆ ಕೊನೆಗಳಿಗೆಯವರೆಗೂ ಯಾರು ಯಾರನ್ನು ಬೆಂಬಲಿಸುತ್ತಾರೆ ಎನ್ನುವುದನ್ನು ಊಹಿಸುವುದು ಸಾಧ್ಯವಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button