ಕಣವಿ ಅವರನ್ನ ರಾಷ್ಟ್ರಕವಿ ಎಂದು ಘೋಷಿಸಬೇಕು: ನಿಜಗುಣಾನಂದ ಸ್ವಾಮಿಜಿ ಒತ್ತಾಯ

ಧಾರವಾಡ: ಯಾವುದೇ ವಿವಾದಗಳನ್ನು ಮೈ ಮೇಲೆ ಏಳೆದುಕೊಳ್ಳದೆ ನಾಡೋಜ ಚೆನ್ನವೀರ ಕಣವಿಯವರು ಬಾಳಿ ಬದುಕಿದ್ದರು. ಅನೇಕ ಯುವ ಕವಿಗಳಿಗೆ ಅವರು ಸಧಾ ಸ್ಫೂರ್ತಿಯಾಗಿದ್ದರು. ಈಗ ಅವರು ನಮ್ಮೊಂದಿಗೆ ಇಲ್ಲ. ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲ್ಲಿ. ಜೊತೆಗೆ ಅವರನ್ನು ರಾಷ್ಟ್ರಕವಿ ಎಂದು ಕೇಂದ್ರ ಸರ್ಕಾರ ಆದಷ್ಟು ಬೇಗ ಘೋಷಣೆ ಮಾಡಬೇಕು ಎಂದು ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮಿಗಳು ಒತ್ತಾಯ ಮಾಡಿದರು.
ನಗರದ ಕೆಸಿಡಿ ಕಾಲೇಜು ಆವರಣದಲ್ಲಿ ನಾಡೋಜ ಚನ್ನವೀರ ಕಣವಿಯವರ ಪಾರ್ಥಿವ ಶರೀರದ ಅಂತಿ ದರ್ಶನ ಪಡೆದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಿರಿಯ ಕವಿಗಳಾದ ಚನ್ನವೀರ ಕಣವಿಯವರು ರಾಷ್ಟ್ರ ಕವಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ಅವರನ್ನು ರಾಷ್ಟ್ರ ಕವಿ ಎಂದು ಘೋಷಣೆ ಮಾಡುವ ಮೂಲಕ ಗೌರವ ನೀಡುವ ಕೆಲಸವಾಗಬೇಕು. ಯಾವುದೇ ವಿವಾದಗಳನ್ನು ಸೃಷ್ಠಿಸದೇ ಎಲ್ಲರ ಪ್ರೀತಿಗೆ ಕಣವಿಯವರು ಪಾತ್ರರಾಗಿದ್ದರು. ಆದರೆ ಈಗ ಅವರು ನಮ್ಮೊಂದಿಗೆ ಇಲ್ಲ. ಅವರ ಈ ಅಗಲಿಕೆ ಸಾರಸ್ವತ ಲೋಕಕ್ಕೆ ತುಂಬಾಲಾರದ ನಷ್ಟ ಎಂದರು.
ಕಣವಿಯವರ ಅಗಲಿಕೆ ಸಾಹಿತ್ಯ ಪ್ರೇಮಿಗಳಲ್ಲಿ ನೋವುಂಟು ಮಾಡಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಚನ್ನವೀರ ಕಣವಿಯವರು ಇನಷ್ಟು ದಿನ ನಮ್ಮ ಜೊತೆ ಇರುತ್ತಾರೆ ಎಂಬ ಆಶ ಭಾವನೆ ಸಾಹಿತ್ಯ ಪ್ರೇಮಿಗಳಲ್ಲಿ ಇತ್ತು. ಆದರೆ ಈಗ ವಿಧಿಯಾಟದ ಮುಂದೆ ಯಾರು ದೊಡ್ಡವರಲ್ಲ. ಅವರ ನಿಧನ ಸಾಹಿತ್ಯ ಪ್ರೇಮಿಗಳಲ್ಲಿ ನೋವುಂಟು ಮಾಡಿದೆ. ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೇವರು ಕರುಣಿಸಲ್ಲಿ ಎಂದು ಕೇಳಿಕೊಳ್ಳುವ ಮೂಲಕ ಕಣವಿಯವರ ಕೆಲವು ಕವನಗಳನ್ನ ಮೇಲುಕು ಹಾನಿ ಸಂತಾಪ ಸೂಚಿಸಿದರು.




