
ಹೊಸದೆಹಲಿ: ಜಾಥ ಧರ್ಮ ಮತ್ತು ಪ್ರದೇಶದಂತಹ ಸಂಕುಚಿತ ಪರಿಗಣನೆಗಳಿಂದ ಮೇಲೆರಲು ಮತ್ತು ಇತರ ಧರ್ಮಗಳನ್ನು ಎಂದಿಗೂ ಅಗೌರವಗೊಳಿಸಬೇಡಿ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಯುವಕರಿಗೆ ಕರೆ ನೀಡಿದ್ದಾರೆ.
ಉಪ ರಾಷ್ಟ್ರಪತಿ ನಿವಾಸದಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳ ತೆಲುಗು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಜೀವನದ ಬಗ್ಗೆ ರಚನಾತ್ಮಕ ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಯುವಕರು ಯಶಸ್ವಿ ನಾಯಕರಾಗಲು ಸಹಿಷ್ಣುತೆ, ತಾಳ್ಮೆ, ಶಿಸ್ತು, ಕಠಿಣ ಪರಿಶ್ರಮ ಓದುವಿಕೆ ಮತ್ತು ಸಹಾನುಭೂತಿಯ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದು ಅವರು ಯುವಕರನ್ನು ಒತ್ತಾಯಿಸಿದರು.




