ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ್ ಕಾರಿಡರ್ ಯೋಜನೆಯ ಮೊದಲ ಹಂತವನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.
ಕಾಶಿ ದೇವಾಲಯದ ಕಳೆದುಕೊಂಡ ವೈಭವವನ್ನು ಮರಳಿ ತರಲು 339 ಕೋಟಿ ರೂಪಾಯಿ ವೆಚ್ಚದಲ್ಲಿ ರೂಪಿಸಲಾದ ಯೋಜನೆ ಇದಾಗಿದ್ದು, ಕಾಶಿ ದೇವಸ್ಥಾನದಿಂದ ಗಂಗಾ ಘಾಟ್ಗೆ ಒಂದೇ ಸ್ಟ್ರೆಚರ್ನಲ್ಲಿ ಈ ಕಾರಿಡರ್ ಸಂಪರ್ಕ ಕಲ್ಪಿಸಲಿದೆ.
ಇದು ಪ್ರಧಾನಿ ಮೋದಿಯ ಕನಸಿನ ಯೋಜನೆ ಎನ್ನಲಾಗಿದ್ದು, ಎರಡು ವರ್ಷಗಳಲ್ಲೇ ಬಹುತೇಕ ಕೆಲಸ ಮೋದಿ ಅವರ ಸಂಸದೀಯ ಕ್ಷೇತ್ರ ವಾರಣಾಸಿಗೆ ಎರಡು ದಿನಗಳ ಪ್ರವಾಸದಲ್ಲಿರುವ ಮೋದಿ ಅವರಿಗೆ ನಗರ ನಿವಾಸಿಗಳಿಂದ ಅದ್ದೂರಿ ಸ್ವಾಗತ ದೊರೆಯಿತು. ಉದ್ಘಾಟನೆಗೂ ಮುನ್ನ ಕಾಳ ಭೈರವ್ ದೇವಸ್ಥಾನದಲ್ಲಿ ಮೋದಿ ಪ್ರಾರ್ಥನೆ ಸಲ್ಲಿಸಿ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಖಿರ್ಕಿಯಾ ಘಾಟ್ ತಲುಪಿ, ಅಲ್ಲಿಂದ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಖಿರ್ಕಿಯಾ ಘಾಟ್ನಿಂದ ಲಲಿತಾ ಘಾಟ್ಗೆ ಡಬಲ್ ಡೆಕ್ಕರ್ ದೋಣಿಯಲ್ಲಿ ಪ್ರಯಾಣಿಸಿದರು.
ಉಡುಪಿ ಕೃಷ್ಣಮಠದಲ್ಲಿ ನೇರ ಪ್ರಸಾರ
ದೇವಾಲಯಗಳ ನಗರಿ ಉಡುಪಿಯಲ್ಲೂ ಕೃಷ್ಣ ಮಠದ ರಥಬೀದಿಯಲ್ಲಿ ಬಿಗ್ ಸ್ಕ್ರೀನ್ ಅಳವಡಿಸಲಾಗಿದೆ. ಪೇಜಾವರ ಮಠದ ಮುಂಭಾಗದಲ್ಲಿ ಹಾಕಿರುವ ಸ್ಕ್ರೀನ್ನಲ್ಲಿ ಕಾಶಿಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪ್ರಧಾನಿ ಮೋದಿ ಅವರ ಭಾಗವಹಿಸುವಿಕೆಯ ದೃಶ್ಯಾವಳಿಗಳನ್ನು ಜನರು ನೇರಪ್ರಸಾರದಲ್ಲಿ ವೀಕ್ಷಿಸುತ್ತಿದ್ದಾರೆ. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, ಪ್ರಧಾನಿ ಮೋದಿಯವರ ವಿಶೇಷ ಆಹ್ವಾನದ ಮೇರೆಗೆ ಈಗಾಗಲೇ ಕಾಶಿಗೆ ತೆರಳಿದ್ದಾರೆ.
