ರಾಷ್ಟ್ರೀಯಸುದ್ದಿ

ರಾಜಾಸ್ಥಾನದಲ್ಲಿ ಕಾಡ್ಗಿಚ್ಚು; ಬೆಂಕಿ ನಂದಿಸಲು ಅರಣ್ಯ ಇಲಾಖೆ ಹರಸಹಾಸ

ರಾಜಾಸ್ಥಾನದಲ್ಲಿ ಕಾಡ್ಗಿಚ್ಚು; ಬೆಂಕಿ ನಂದಿಸಲು ಅರಣ್ಯ ಇಲಾಖೆ ಹರಸಹಾಸ

ಜೈಪುರ: ರಾಜಾಸ್ಥಾನದ ಅಲ್ವಾರ್ ಜಿಲ್ಲೆಯ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊತ್ತಿಕೊಂಡಿರುವ ಕಾಡ್ಗಿಚ್ಚನ್ನು ಆರಿಸಲು ಬುಧವಾರ ವಾಯುಪಡೆಯ ಎರಡು ಹೆಲಿಕಾಪ್ಟರ್​ಗಳು ನೀರನ್ನು ಸಿಂಪಡಿಸುವ ಮೂಲಕ ಅಗ್ನಿಶಾಮಕ ಕಾರ್ಯಾಚರಣೆಯನ್ನು ಆರಂಭಿಸಿವೆ. ಬೆಂಕಿ ಬಹುತೇಕ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಬೆಂಕಿ ಹೆಚ್ಚು ವ್ಯಾಪಿಸಿಲ್ಲ. ನಿನ್ನೆಗೆ ಹೋಲಿಸಿದರೆ ಶೇಕಡ 50ಕ್ಕೂ ಹೆಚ್ಚು ಬೆಂಕಿ ಹತೋಟಿಗೆ ಬಂದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕಡಿಮೆ ಹುಲ್ಲುಗಾವಲು ಪ್ರದೇಶವು ಇನ್ನೂ ಬೆಂಕಿಯಲ್ಲಿದೆ. ಆದ್ದರಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ನಾವು ಭಾವಿಸುತ್ತೇವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ನಿನ್ನೆಯ ದಿನ 10 ಕಿಲೋಮೀಟರ್ ವ್ಯಾಪಿಸಿದ್ದ ಬೆಂಕಿ ಇಂದು 5-6 ಚದರ ಕಿಲೋಮೀಟರ್​ಗೆ ಇಳಿಕೆಯಾಗಿದೆ. ಹೆಲಿಕಾಪ್ಟರ್​ಗಳು ಬೆಂಕಿ ಆರಿಸುವುದರಲ್ಲಿ ತೊಡಗಿಕೊಂಡಿವೆ ಎನ್ನಲಾಗಿದೆ.

ಅರಣ್ಯ ಇಲಾಖೆ ಸುತ್ತಮುತ್ತಲಿನ ಹಳ್ಳಿಗರಿಗೆ ಬೆಂಕಿ ಹೊತ್ತಿರುವ ಅರಣ್ಯ ಪ್ರದೇಶಕ್ಕೆ ತೆರಳದಂತೆ ಸೂಚಿಸಿದೆ. ಏಕೆಂದರೆ ಆ ಅರಣ್ಯಪ್ರದೇಶದಲ್ಲಿ 4 ಹುಲಿಗಳು ಹಾಗೂ 5 ಮರಿಗಳು ಇರುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button