ಯುವತಿಗೆ ಮೊಬೈಲ್ ಉಡುಗೊರೆ ಕೊಟ್ಟಿದ್ದಕ್ಕೆ ದಲಿತ ಯುವಕನಿಗೆ ಚಪ್ಪಲಿ ಹಾರ

ಮಧ್ಯಪ್ರದೇಶ : ದಲಿತ ಸಮುದಾಯದ ಯುವಕ ಸವರ್ಣೀಯ ಸಮುದಾಯದ ಯುವತಿಗೆ ಮೊಬೈಲ್ ಉಡುಗೊರೆ ನೀಡಿದ್ದಕ್ಕೆ ದಲಿತ ಯುವಕನಿಕೆ ತಲೆ ಬೋಳಿಸಿ, ಚಪ್ಪಲಿಹಾರ ಹಾಕಿ, ಎಂಜಲು ತಿನ್ನಿಸಿದ ಘಟನೆ ಮಧ್ಯ ಪ್ರದೇಶದ ಜಬಲ್ ಪುರದಲ್ಲಿ ನಡೆದಿದೆ.
ರಾಜ್ ಕುಮಾರ್ ಮೆಹ್ರಾ (20)ಎಂಬ ಯುವಕನ ಮೇಲೆ ಜಾತಿಯ ಕಾರಣಕ್ಕಾಗಿ ಇಂತಹ ಅಮಾನವೀಯ ದೌರ್ಜನ್ಯ ನಡೆದಿದೆ ಎನ್ನಲಾಗಿದೆ.
ರಾಜ್ ಕುಮಾರ್ ಮೆಹ್ರಾ ಮೇಲ್ಜಾತಿಗೆ ಸೇರಿದ 19 ವರ್ಷದ ಯವತಿಯನ್ನು ಪ್ರೀತಿಸುತ್ತಿದ್ದ ಅದ್ದರಿಂದ ಯುವತಿ ಪ್ರಿಯಕರನಿಗೆ ಮೊಬೈಲ್ ಕೊಡಿಸು ಎಂದು ಕೇಳಿಕೊಂಡಿದ್ದಳು. ಅದಕ್ಕಾಗಿ ರಾಜ್ ಕುಮಾರ್ ಮೆಹ್ರಾ ಯುವತಿಗೆ ಮೊಬೈಲ್ ಕೊಡಿಸಿದ್ದ, ಎನ್ನಲಾಗಿದ್ದು ಇದು ಯುವತಿಯ ಮನೆಯವರಿಗೆ ಗೊತ್ತಾಗಿ ಯುವಕನನ್ನು ತಮ್ಮ ಮನೆಯ ಬಳಿ ಕರೆಸಿಕೊಂಡು ಯುವತಿಯ ಕುಟುಂಬಸ್ಥರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಂತ್ರಸ್ತರ ರಾಜ್ ಕುಮಾರ್ ಮೆಹ್ರಾ ನ ಕಡೆಯ ವ್ಯಕ್ತಿಯೊಬ್ಬರನ್ನು ಯುವತಿಯ ಮನೆಯವರು ಬಂಧನದಲ್ಲಿ ಇಟ್ಟಿರುವುದಾಗಿ ಯುವಕನ ಸಂಬಂದಿಕರು ಹೇಳಿದ್ದಾರೆ, ಆದರೆ ಇದುವರೆಗೂ ಈ ಬಗ್ಗೆ ಪೋಲೀಸರು ಪ್ರಕರಣ ದಾಖಲಿಸಿಲ್ಲ ಎಂದು ಸಂತ್ರಸ್ತರು ಹೇಳಿದ್ದಾರೆ.




