ಭಟ್ಕಳದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಆಗ್ರಹಿಸಿ ಎಸಿಗೆ ಮನವಿ

ಕಾರವಾರ : ಭಟ್ಕಳ ತಾಲೂಕಿನ ಸುತ್ತ 60 ಕಿ.ಮೀ.ವ್ಯಾಪ್ತಿಯಲ್ಲಿ ಎಲ್ಲೂ ರಕ್ತನಿಧಿ ಕೇಂದ್ರ ಇಲ್ಲದೇ ಇರುವುದರಿಂದ ಹೆಚ್ಚಿನ
ರೋಗಿಗಳು ರಕ್ತದ ಕೊರತೆಯಿಂದಲೇ ಸಾವನ್ನಪ್ಪುತ್ತಿದ್ದಾರೆ. ಹೀಗೆ ಜೀವಕ್ಕೆ ಅಪಾಯ ಎದುರಾಗು ತ್ತಿರುವ ಹಿನ್ನೆಲೆಯಲ್ಲಿ ತಾಲೂಕಿಗೆ ಒಂದು ಸುಸಜ್ಜಿತವಾದ ಬ್ಲಡ್ ಬ್ಯಾಂಕ್ ನ ಅವಶ್ಯಕತೆಯನ್ನು ಮನಗಂಡು ಭಟ್ಕಳ ಉಪವಿಭಾಗಾಧಿಕಾರಿಯವರಿಗೆ ಮನವಿಯನ್ನು ನೀಡಲಾಯಿತು.
ಭಟ್ಕಳದಲ್ಲಿ ಚತುಷ್ಪತ ಹೆದ್ದಾರಿ ಹಾದು ಹೋಗಿರುವ ಕಾರಣ ಸ್ಥಳೀಯವಾಗಿ ಹಲವು ಅಪಘಾತಗಳು ನಡೆಯುತ್ತಿರು ತ್ತದೆ.ಆ ಸಮಯದಲ್ಲಿ ತೀವ್ರ ರಕ್ತಸ್ರಾವವಾಗಿ ರಕ್ತದ ಅವಶ್ಯಕತೆ ಬಹಳವಾಗಿರುತ್ತದೆ. ಹಾಗೆ ಗರ್ಭಿಣಿ ಸ್ತ್ರೀಯರಿಗೆ ಪ್ರಸವದ ಸಮಯದಲ್ಲೂ ಸಹ ರಕ್ತದ ಅವಶ್ಯಕತೆ ಇರುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ದಿನೇಶ ನಾಯ್ಕ ಚೌಥನಿ,ಬಿಜೆಪಿ ಕಾರ್ಮಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಮುಕುಂದ ನಾಯ್ಕ,ಶಂಕರ ನಾಯ್ಕ ಚೌತನಿ ಮನವಿ ಸಲ್ಲಿಕೆಯ ಸಂದರ್ಭ ದಲ್ಲಿ ಉಪಸ್ಥಿತರಿದ್ದರು.
ಸರಕಾರ ಇತ್ತ ಕಡೆ ಗಮನ ಹರಿಸಿ ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಒಂದು ಪೂರ್ಣ ಪ್ರಮಾಣದ ರಕ್ತನಿಧಿ ಕೇಂದ್ರ ಸ್ಥಾಪಿಸಿದರೆ,ಸುಸಜ್ಜಿತ ಸರಕಾರಿ ಆಸ್ಪತ್ರೆಯ ಕಿರೀಟಕ್ಕೊಂದು ಗರಿ ಇದ್ದಂತೆಯೇ.ಕೋವಿಡ್ ನಿಯಮಾವಳಿಯ ಪ್ರಕಾರ ಮನವಿ ಸಲ್ಲಿಸಲು ಮೂವರಿಗೆ ಮಾತ್ರ ಅವಕಾಶ ಇದ್ದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿಲ್ಲ ಎಂದು ದಿನೇಶ್ ನಾಯ್ಕ ಚೌತನಿ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.




