Latestರಾಷ್ಟ್ರೀಯ

ಮಹಾರಾಷ್ಟ್ರ: 12 ಬಿಜೆಪಿ ಶಾಸಕರ ಅಮಾನತು

ಮುಂಬೈ: ಮಹಾರಾಷ್ಟ್ರದಲ್ಲಿ 12 ಬಿಜೆಪಿ ಶಾಸಕರನ್ನು ಒಂದು ವರ್ಷದ ಅವಧಿಗೆ ಸ್ಪೀಕರ್ ಅಮಾನತುಗೊಳಿಸಿದ್ದಾರೆ.

ಇಂದು ಮುಂಗಾರು ಅಧಿವೆಶನ ಆರಂಭವಾಗುತ್ತಿದ್ದಂತೆಯೇ ಇಂತದೊಂದು ಬೆಳವಣಿಗೆಗೆ ಮಹಾರಾಷ್ಟ್ರ ವಿಧಾನಸಭೆ ಸಾಕ್ಷಿಯಾಯಿತು. ಬಿಜೆಪಿ ಶಾಸಕರು ಪ್ರಿಸೈಡಿಂಗ್ ಅಧಿಕಾರಿಯ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅಲ್ಲಗಳೆದಿದ್ದಾರೆ.

ಸ್ಥಳೀಯ ಚುನಾವಣೆಗಳಲ್ಲಿ ರಾಜಕೀಯ ಮೀಸಲಾತಿ ಒದಗಿಸುವ ನಿರ್ಣಯವನ್ನು ಮಹಾ ವಿಕಾಸ್ ಅಗಾಢಿ ಮಂಡಿಸಿದಾಗ ಇದಕ್ಕೆ ಬಿಜೆಪಿ ಶಾಸಕರಿಂದ ಆಕ್ಷೇಪ ವ್ಯಕ್ತವಾಯಿತು. ಈ ವೇಳೆ ನಡೆದ ಗದ್ದಲದಲ್ಲಿ ಹದ್ದು ಮೀರಿದರೆಂಬ ಕಾರಣಕ್ಕೆ ಅಸಭ್ಯ ವರ್ತನೆ ಆರೋಪದ ಮೇಲೆ ಸಾಸಕರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button