
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಶೇರ್ ಬಹದ್ದೂರ್ ದೇವುಬಾ ಅವರು ಶನಿವಾರ ಗಡಿಯಾಚೆಗಿನ ರೈಲ್ವೆ ಜಾಲ, ವಿದ್ಯುತ್ ಪ್ರಸರಣ ಮಾರ್ಗವನ್ನು ಉದ್ಘಾಟಿಸಿದರು ಮತ್ತು ವ್ಯಾಪಕ ಮಾತುಕತೆ ನಡೆಸಿದ ನಂತರ ನೇಪಾಳದಲ್ಲಿ ಭಾರತದ ರುಪೇ ಪಾವತಿ ಕಾರ್ಡನ್ನು ಆರಂಭಿಸಿದರು.
ಉಭಯ ದೇಶಗಳ ಮುಖಂಡರು ರೈಲ್ವೇ ಮತ್ತು ಇಂಧನ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಮತ್ತಷ್ಟು ವಿಶಾಲ ತಳಹದಿಯ ಸಹಕಾರಕ್ಕೆ ಪ್ರತಿಜ್ಷೆ ಮಾಡಿದರು. ವಿದ್ಯುತ್ ಸಹಕಾರದ ಕುರಿತು ಉಭಯ ಪಕ್ಷಗಳ ನಡುವಿನ ಜಂಟಿ ದೂರದೃಷ್ಟಿ ಹೇಳಿಕೆಯು ಈ ಕ್ಷೇತ್ರದಲ್ಲಿ ಭವಿಷ್ಯದ ಸಹಾರದ ನೀಲನಕ್ಷೆ ಎಂದು ಸಾಬೀತುಪಡಿಸುತ್ತದೆ ಎಂದು ಮೋದಿ ಹೇಳಿದರು.




