
ನವದೆಹಲಿ: ಗಡಿ ವಿವಾದ ರಾಜ್ಯ ರಾಜ್ಯಗಳಿಗೆ ಹೊಸದೇನಲ್ಲ. ಹಲವು ರಾಜ್ಯಗಳ ಗಡಿ ವಿವಾದಗಳಿಗೆ ದಶಮಾನಗಳ ಇತಿಹಾಸವೇ ಇದೆ. ನಮ್ಮ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ, ಬೆಳಗಾವಿ ಕುರಿತಂತೆ ಮಹಾರಾಷ್ಟ್ರದ ಜೊತೆಗೆ, ಕಾಸರಗೋಡು ಕುರಿತಂತೆ ಕೇರಳ ಜೊತೆಗೆ ಗಡಿ ವಿವಾದ ಆಗಾಗ ಹೊತ್ತಿಕೊಳ್ಳುತ್ತಲೇ ಇರುತ್ತದೆ.
ಇಂಥದ್ದೇ ಒಂದು ಗಡಿ ವಿವಾದ ಅಸ್ಸಾಂ ಮತ್ತು ಮೇಘಾಲಯಗಳ ನಡುವೆ ದಶಕಗಳಿಂದಲೂ ನಡೆಯುತ್ತಲೇ ಇತ್ತು. ಇವೆರಡೂ ರಾಜ್ಯಗಳ ನಡುವಿನ ಈ ಗಡಿವಿವಾದಕ್ಕೆ ಈಗ 50 ವರ್ಷಗಳ ನಡುಹರೆಯ! ಇಷ್ಟು ವರ್ಷಗಳ ನಂತರ ಇವೆರಡೂ ರಾಜ್ಯಗಳು ತಮ್ಮ ನಡುವೆ ಬಾಕಿಯಿರುವ ಗಡಿವಿವಾದವನ್ನು ಬಗೆಹರಿಸಿಕೊಳ್ಳಲು ಮಂಗಳವಾರ ಸಂಜೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಲಿವೆ.
ಮಧ್ಯಾಹ್ನ 3.30ಕ್ಕೆ MHA ಕಚೇರಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಅಸ್ಸಾಂ ಮತ್ತು ಮೇಘಾಲಯದ ಮುಖ್ಯಮಂತ್ರಿಗಳು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ಗೃಹಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಮತ್ತು ಮೇಘಾಲಯದ ಮೇಘಾಲಯ ಕಾರ್ನಾಡ್ ಕೆ ಸಂಗ್ಮಾ, ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಈ ರಾಜ್ಯದ ಅಧಿಕಾರಿಗಳು ಮತ್ತು ಎಂಎಚ್ಎ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಒಪ್ಪಂದಕ್ಕೆ ಸಹಿ ಹಾಕುವ ಮುನ್ನ MHA ನೊಂದಿಗೆ ಅಂತಿಮ ಸುತ್ತಿನ ಚರ್ಚೆಯೂ ನಡೆಯುವುದಾಗಿ ಹೇಳಲಾಗಿದೆ.




