ಆಹಾರಲೈಫ್ ಸ್ಟೈಲ್
ಸುಲಭವಾಗಿ ಹೀರೇಕಾಯಿ ಪಲ್ಯ ಮಾಡುವುದು ಹೇಗೆ ಗೊತ್ತಾ?

ಸಾಮಾನ್ಯವಾಗಿ ಮಹಿಳೆಯರಿಗೆ ಬೆಳಗ್ಗೆ ಎದ್ದರು ತಕ್ಷಣೆ ಏನು ತಿಂಡಿ ಮಾಡಬೇಕು ಅಂತಾ ಚಿಂತೆ ಕಾಡುತ್ತೆ. ಅದರಲ್ಲೂ ರೋಟ್ಟಿ, ಚಪಾತಿ ಮಾಡಿದಾಗ ಅದರ ಜೊತೆಗೆ ಸೈಡ್ಸ್ ಪಲ್ಯ ಏನು ಮಾಡಬೇಕು ಎಂಬುದು ದೊಡ್ಡ ತಲೆನೋವು ಆಗುತ್ತೆ. ಹೀಗಾಗಿ ಇಲ್ಲೊಂದು ಸವಿಯಲು ರುಚಿಕರ ರೆಸಿಪಿ ಇದೆ. ಅದೇ ಹೀರೇಕಾಯಿ ಪಲ್ಯ. ಇದನ್ನು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
- ಹೀರೆಕಾಯಿ- 2
- ಅಡುಗೆ ಎಣ್ಣೆ- 2 ದೊಡ್ಡ ಚಮಚ
- ರುಚಿಗೆ ತಕ್ಕಷ್ಟು ಉಪ್ಪು
- ಸಾಸಿವೆ 1 ಚಮಚ
- ಜೀರಿಗೆ ಅರ್ಧ ಚಮಚ
- ಈರುಳ್ಳಿ 1
- ಟೊಮ್ಯಾಟೋ- 2
- ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ
- ಅರಿಶಿಣ ಪುಡಿ- ಸ್ವಲ್ಪ
- ಖಾರದ ಪುಡಿ- 1 ಚಮಚ
- ಗರಂ ಮಸಾಲಾ ಪುಡಿ- 1 ಚಮಚ
- ಕಸೂರಿ ಮೇಥಿ-ಸ್ವಲ್ಪ
- ಮಾಡುವ ವಿಧಾನ:
- ಟೊಮ್ಯಾಟೋ, ಹೀರೆಕಾಯಿ ಚೆನ್ನಾಗಿ ತೊಳೆದು ಸಣ್ಣದಾಗಿ ಕಟ್ ಮಾಡಿಕೊಳ್ಳಿ.ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಕಾಯಿಸಿ. ಸಾಸಿವೆ, ಜೀರಿಗೆ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮ್ಯಾಟೋ ಹಾಕಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು.ನಂತರ ಹೆಚ್ಚಿದ ಹೀರೆಕಾಯಿ ಹಾಕಿ ಹಾಗೂ ಚಿಟಿಕೆ ಉಪ್ಪನ್ನು ಹಾಕಿ ಚೆನ್ನಾಗಿ ಹುರಿಯಿರಿ.ಅದಕ್ಕೆ ಗರಂ ಮಸಾಲಾ ಪುಡಿ, ಖಾರದ ಪುಡಿ, ಕಸೂರಿ ಮೇಥಿ, ಅರಿಶಿಣ ಪುಡಿ ಹಾಕಿ ಬೇಯಿಸಿದರೆ ರುಚಿ ರುಚಿಯಾದ ಹೀರೆಕಾಯಿ ಪಲ್ಯ ಸವಿಯಲು ಸಿದ್ಧವಾಗುತ್ತದೆ.




