ಆರೋಗ್ಯಲೈಫ್ ಸ್ಟೈಲ್

ನೆಲನೆಲ್ಲಿಯ ಪ್ರಯೋಜನ ತಿಳಿಯಿರಿ

ಪವಿತ್ರಾ

ಮಳೆಗಾಲದಲ್ಲಿ ಮನೆಯಂಗಳದಲ್ಲಿ ಅಲ್ಲಲ್ಲಿ ಹುಟ್ಟಿಕೊಳ್ಳುವ ನೆಲನೆಲ್ಲಿಯ ಸೇವನೆಯಿಂದ ಯಾವೆಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ?

ಸರ್ಪಸುತ್ತು, ನ್ಯುಮೋನಿಯಾ ಹಾಗೂ ಚಿಕನ್ ಗುನ್ಯಾ ಉಂಟುಮಾಡುವ ವೈರಸ್ ಗಳನ್ನು ನಾಶಪಡಿಸುವ ಶಕ್ತಿ ಈ ವೈರಸ್ ಗಿದೆ. ಮೂತ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಕೂಡಾ ಇದು ನಿವಾರಣೆ ಮಾಡುತ್ತದೆ.

ನೆಲನೆಲ್ಲಿ ಕಷಾಯ ಅಥವಾ ತಂಬುಳಿ ಮಾಡಿ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಸೊಳ್ಳೆ ಕಚ್ಚಿ ಮೂಡಿದ ಗುಳ್ಳೆ, ಅಲರ್ಜಿಯಿಂದಾದ ಕಜ್ಜಿ ಅಥವಾ ತುರಿಕೆಗೆ ಇದನ್ನು ಜಜ್ಜಿ ಇದರ ರಸವನ್ನು ಹಚ್ಚುತ್ತಾರೆ.

ತಿಂಗಳ ರಜಾದ ಅವಧಿಯಲ್ಲಿ ಕೆಲವು ಮಹಿಳೆಯರಿಗೆ ವಿಪರೀತ ರಕ್ತಸ್ರಾವವಾಗುತ್ತದೆ. ನೆಲನೆಲ್ಲಿಯ ಕಷಾಯ ಇಲ್ಲವೇ ತಂಬುಳಿ ಸೇವನೆಯಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಶೀತ ನೆಗಡಿ ತಲೆನೋವಿನಂಥ ಸಮಸ್ಯೆಗಳನ್ನೂ ಇದರ ಕಷಾಯ ಗುಣಪಡಿಸುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button