ಆಹಾರಲೈಫ್ ಸ್ಟೈಲ್
ಟೊಮ್ಯಾಟೋ ರೈಸ್

ಬೇಕಾಗುವ ಪದಾರ್ಥಗಳು
ಎಣ್ಣೆ-7-8 ಚಮಚ
ಚಕ್ಕೆ- 2
ಲವಂಗ-4
ಏಲಕ್ಕಿ-2
ಪಲಾವ್ ಎಲೆ- 2-3
ತುಪ್ಪ-ಸ್ವಲ್ಪ
ಈರುಳ್ಳಿ-2
ಪುದೀನಾ-ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
ಟಮ್ಯಾಟೋ- 5-6
ಬಟಾಣಿ- ಒಂದು ಸಣ್ಣ ಬಟ್ಟಲು
ಖಾರದ ಪುಡಿ- 2 ಚಮಚ
ಅರಿಶಿನದ ಪುಡಿ- ಸ್ವಲ್ಪ
ಗರಂ ಮಸಾಲಾ- ಅರ್ಧ ಚಮಚ
ಅಕ್ಕಿ- 1 ಗ್ಲಾಸ್
ನೀರು- ಒಂದೂವರೆ ಗ್ಲಾಸ್
ಮಾಡುವ ವಿಧಾನ: ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ, ತುಪ್ಪ ಹಾಕಿ ಕಾಯಲು ಬಿಡಿ. ನಂತರ ಇದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಈರುಳ್ಳಿ, ಬಟಾಣಿ, ಟೊಮಾಟೋ, ಪುದೀನಾ ಹಾಕಿ ಕೆಂಪಗೆ ಹುರಿದುಕೊಳ್ಳಿ. ಕೆಂಪಗಾದ ಬಳಿಕ ಉಪ್ಪು, ಖಾರದ ಪುಡಿ, ಅರಿಶಿಣದ ಪುಡಿ, ಗರಂ ಮಸಾಲಾ, ಅಕ್ಕಿ ಹಾಗೂ ಅಳತೆ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮೂರು ಕೂಗು ಕೂಗಿಸಿಕೊಂಡರೆ ರುಚಿಕರವಾದ ಟಮ್ಯಾಟೋ ರೈಸ್ ಸವಿಯಲು ಸಿದ್ಧ.




