ಅವಸರಕ್ಕೆ ಇದೇ ಹೇರ್ ಸ್ಟೈಲ್ ಬೆಸ್ಟ್

ಮದುವೆ ಸಮಾರಂಭಗಳಿಗೆ ತೆರಳುವಾಗ ಯಾವ ವಿನ್ಯಾಸ ಹೇರ್ ಸ್ಟೈಲ್ ಮಾಡಿಕೊಳ್ಳುವುದು ಎಂದು ತಲೆಕೆಡಿಸಿಕೊಳ್ಳುತ್ತಿದ್ದೀರಾ. ಹಾಗಿದ್ದರೆ ಇಲ್ಲಿ ಕೇಳಿ. ಸದಾ ಬೇಡಿಕೆ ಉಳಿಸಿಕೊಂಡಿರುವ ಈ ಸ್ಟೈಲ್ ಗಳು ನಿಮಗೆ ಬೇರೆಯದೇ ಲುಕ್ ಅನ್ನು ಒದಗಿಸಬಹುದು.
ಮೇಕಪ್ ಗೆ ಹೆಚ್ಚಿನ ಸಮಯವೆಲ್ಲಾ ಹೋಗಿ, ತಲೆಕೂದಲನ್ನು ಯಾವ ವಿನ್ಯಾಸದಲ್ಲಿ ಬಾಚುವುದು ಎಂದು ಯೋಚಿಸಿದ್ದೀರಾ, ಇಂಥ ಸಂದರ್ಭದಲ್ಲಿ ಕರ್ಲೀ ಹೇರ್ ನಿಮಗೆ ನೆರವಾಗುತ್ತದೆ. ಯಾವುದೇ ವಿನ್ಯಾಸದ ಉಡುಪು ಧರಿಸಿದ್ದರೂ ಅದಕ್ಕೆ ಹೊಂದಿಕೊಳ್ಳುವ ಗುಣ ಕೂದಲಿಗಿದೆ. ಇದರ ತಯಾರಿಗೂ ಹೆಚ್ಚು ಸಮಯ ಬೇಕಿಲ್ಲ.
ಇನ್ನು ಲೋ ಚಿಗ್ ನಾನ್ ಸ್ಟೈಲ್ ನಿಮಗೆ ಕ್ಲಾಸಿಕ್ ಲುಕ್ ನೀಡುತ್ತದೆ. ಇಂದಿಗೂ ಟ್ರೆಂಡಿಂಗ್ ನಲ್ಲಿರುವ ಈ ವಿನ್ಯಾಸ ಸೀರೆಯಿಂದ ಹಿಡಿದು ಆಧುನಿಕ ಉಡುಪಿನ ತನಕ ಎಲ್ಲಾ ಸ್ಟೈಲ್ ಗಳಿಗೂ ಹೊಂದಿಕೊಳ್ಳುತ್ತದೆ. ಬಾಬಿ ಪಿನ್ ಗಳು, ಬನ್ ಗಳು ಇದರ ಆಕರ್ಷಣೆಯನ್ನು ಹೆಚ್ಚಿಸುತ್ತವೆ.
ಬ್ರೈಡೆಲ್ ಬನ್ ಸ್ಟೈಲ್ ನಿಮ್ಮ ನೀಳ ಕೂದಲನ್ನು ಹಾಗೆ ಇಳಿಯಲು ಬಿಡದೆ ಸಣ್ಣ ಕ್ಲಿಪ್ ನಿಂದ ಬಂಧಿಸಿಡುತ್ತದೆ. ಎದುರಿನ ಭಾಗದಲ್ಲಿ ಯಾವುದೇ ವಿನ್ಯಾಸವನ್ನು ಅನುಸರಿಸಲು ಇದು ಅವಕಾಶ ನೀಡುತ್ತದೆ. ಆಧುನಿಕ ಕ್ಲಿಪ್ ಗಳು ಹಿಂಭಾಗದ ಸೌಂದರ್ಯವನ್ನು ಹೆಚ್ಚು ಮಾಡುತ್ತವೆ.




