ರಸಿಕನಿಗೆ ಬರೋಬ್ಬರಿ 8 ಜನ ಮಡದಿಯರು, ಸುಖ ಸಂಸಾರದಲ್ಲಿ ಮಹನೀಯರು

ಇಂದಿನ ದಿನದಲ್ಲಿ ವ್ಯಕ್ತಿಗೆ ಒಬ್ಬ ಹೆಂಡತಿಯನ್ನು ನಿಭಾಯಿಸುವುದೇ ಕಷ್ಟ. ಅದರಲ್ಲೂ ಎರಡು ಹೆಂಡತಿ ಇದ್ದಾರೆ ಇನ್ನೂ ಕಷ್ಟ. ಆದರೆ ಇಲ್ಲೊಬ್ಬ ಪುಣ್ಯಾತ್ಮ ಜನ್ಮ ಜಾಲಾಡಿ ಬಿಟ್ಟಿದ್ದಾನೆ. ರಸಿಕ ಮಹಾಶಯ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 8 ಜನರನ್ನು ಮದುವೆಯಾಗಿದ್ದಾನೆ.
ಅಂದ ಹಾಗೆ ಈತ ಥೈಲ್ಯಾಂಡ್ ನವನು. ವೃತ್ತಿಯಲ್ಲಿ ಇವನು ಟ್ಯಾಚೂ ಕಲಾವಿದ. ವಂಗ್ ಡ್ರಮ್ ಸೋರೋಟ್ ಎಂಬ ಹೆಸರಿನ ಕುಟುಂಬವಿದು.ಈತ 8 ಪತ್ನಿಯರ ಮುದ್ದಿನ ಗಂಡ. ಎಲ್ಲರೂ ಸುರ ಸುಂದರಿಯರೆ. ಒಬ್ಬರಿಗಿಂತ ಒಬ್ಬರು ಸೌಂಧರ್ಯವತಿಯರೆ. ಇದೀಗ ಈತ ಅವರ ಜೊತೆ ಜೀವನ ಕಳೆಯುತ್ತಿದ್ದಾನೆ.
ಇನ್ನು ಎಂಟು ಹೆಂಡತಿಯರು ಒಂದೇ ಮನೆಯಲ್ಲಿದ್ದಾರೆ. ಅವಿಭಕ್ತ ಕುಟುಂಬದಲ್ಲಿ ಆತನ ಜೊತೆ ಸುಖ ಸಂಸಾರ ಮಾಡುತ್ತಿದ್ದಾರೆ.ಎಂಟು ಪತ್ನಿಯರಲ್ಲಿ ಕೆಲವರು ಕೆಲಸಕ್ಕೆ ಹೋಗುತ್ತಿದ್ದಾರೆ. ಬಂದ ಸಂಪಾದನೆಯನ್ನು ಗಂಡನಿಗೆ ಕೊಟ್ಟು ಸಂಸಾರದೂಗಿಸಿಕೊಂಡು ಹೋಗುತ್ತಿದ್ದಾರೆ.
ಈ ಪುಣ್ಯತ್ಮಾ ಎಂಟು ಪತ್ನಿಯರಲ್ಲಿ ಯಾರೂ ಗಲಾಟೆ ಮಾಡುತ್ತಿಲ್ಲ. ಎಲ್ಲರೂ ಕೂಡ ಸಂಸಾರವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.
.




