ನಾಟಿವೈದ್ಯ
ನಿದ್ರಾ ಹೀನತೆ ಸಮಸ್ಯಗೆ ಮನೆ ಮದ್ದು

ಬೇಕಾಗುವ ಸಾಮಾಗ್ರಿಗಳು:
ದೊಡ್ಡ ಪತ್ರೆ ಅಥವಾ ಸಾಂಬಾರ್ ಬಳ್ಳಿ ಸೊಪ್ಪು 4 ಟೊಂಗೆ
1/2 ಚಮಚ ಜೇನು ತುಪ್ಪ
1/2 ಕಪ್ ನೀರು
ಮಾಡುವ ವಿಧಾನ:
ಮೊದಲಿಗೆ ಮಿಕ್ಸಿ ಜಾರ್ ಗೆ ದೊಡ್ಡ ಪತ್ರೆ ಸೊಪ್ಪನ್ನು ನೀರು ಹಾಕದೆ ರುಬ್ಬಿಕೊಳ್ಳಬೇಕು ನುಣ್ಣಗೆ ಆದ ನಂತರ ನೀರು ಹಾಕಿ ರುಬ್ಬಿಕೊಳ್ಳಬೇಕು . ರುಬ್ಬಿದ ಮಿಶ್ರಣವನ್ನು ಒಂದು ಲೋಟಕ್ಕೆ ಸೋಸಿಕೊಳ್ಳಬೇಕು. ಈ ರಸಕ್ಕೆ ಜೇನು ತುಪ್ಪ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿ. ಇದು ನಿಮ್ಮನ್ನು ನಿದ್ರಾಹೀನತೆಯಿಂದ ದೂರ ಮಾಡುತ್ತದೆ.



