ಪತ್ರೋಡೆ

ಬೇಕಾಗುವು ಸಾಮಗ್ರಿಗಳು
ಅಕ್ಕಿ 1 ಕಪ್
ಉದ್ದಿನ ಬೇಳೆ 2 ಟೇಬಲ್ ಸ್ಫೂನ್
ತುರಿದ ತೆಂಗಿನ ಕಾಯಿ1 ಕಪ್
ಕೊತ್ತಂಬರಿ ಬೀಜ 2 ಟೇಬಲ್ ಸ್ಫೂನ್
ಜೀರಾ 1 ಟೀ ಸ್ಪೂನ್
ಮೆಂತ್ಯೆ ಬೀಜ ¼ ಟೀ ಸ್ಪೂನ್
ಅರಿಶಿಣ ಪುಡಿ ½ ಟೀ ಸ್ಪೂನ್
ಬೆಲ್ಲ ½ ಕಪ್
ಹುಣಸೆಹಣ್ಣು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಕೆಂಪು ಮೆಣಸಿನಕಾಯಿ 7
ಕೆಸುವಿನ ಎಲೆ 20
ಮಾಡುವ ವಿಧಾನ: ಮೊದಲಿಗೆ ದೊಡ್ಡ ಬಟ್ಟಲಿನಲ್ಲಿ 1 ಕಪ್ ಅಕ್ಕಿ ಮತ್ತು 2 ಟೇಬಲ್ ಸ್ಪೂನ್ ಉದ್ದಿನ ಬೇಳೆಯನ್ನು 3 ಗಂಟೆಗಳ ಕಾಲ ನೆನೆಸಿಡಿ. ನೆನೆಸಿದ ಅಕ್ಕಿಯನ್ನು ಮಿಕ್ಸರ್ ಗೆ ಹಾಕಿ, 1 ಕಪ್ ತೆಂಗಿನಕಾಯಿ, 2 ಟೀ ಸ್ಪೂನ್ ಕೊತ್ತಂಬರಿ ಬೀಜ, 1 ಟೀ ಸ್ಪೂನ್ ಜೀರಾ, ¼ ಟೀ ಸ್ಪೂನ್ ಮಂತ್ಯೆ, ½ ಟೀಸ್ಪೂನ್ ಅರಿಶಿಣ,1/2 ಕಪ್ ಬೆಲ್ಲ, ಹುಣಸೆಹಣ್ಣು, ಉಪ್ಪು, ಒಣ ಮೆಣಸು ಹಾಗೂ ಅಗತ್ಯ ಇರುವಷ್ಟು ನೀರು ಹಾಕಿ ರುಬ್ಬಿಕೊಳ್ಳಿ. ಕೆಸುವಿನ ಎಲೆಯನ್ನು ಚೆನ್ನಾಗಿ ಸುರುಳಿ ಸುತ್ತಿ ಬೇಯಲು ಬಿಡಿ. ಎಲೆ ಚೆನ್ನಾಗಿ ಬೆಂದ ಬಳಿಕ ಹೊರ ತೆಗೆದು ತಣ್ಣಗಾದ ಬಳಿಕ ಸಣ್ಣದಾಗಿ ಹೆಚ್ಚಿಕೊಳ್ಳಿ. ಈಗ ಒಗ್ಗರಣೆ ಹಾಕಿ ಹೆಚ್ಚಿಕೊಂಡ ಎಲೆಯನ್ನು ಅದರಲ್ಲಿ ಹಾಕಿ 2 ನಿಮಿಷ ಬೇಯಲು ಬಿಡಿ. ಕೊನೆಯಲ್ಲಿ ತೆಂಗಿನ ತುರಿ ಹಾಕಿ ಗ್ಯಾಸ್ ಆಫ್ ಮಾಡಿ. ಈಗ ರುಚಿಕರವಾದ ಪತ್ರೋಡೆ ಸವಿಯಲು ಸಿದ್ದ




