ಬಿಳಿ ಕೂದಲಿಗೆ ಇಲ್ಲಿದೆ ಸರಳ ಮನೆಮದ್ದು..!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಸೌಂದರ್ಯದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅದರಲ್ಲೂ ಸೌಂದರ್ಯವಾಗಿ ಕಾಣಲು ಕೂದಲು ಕಾಂತಿ ಬಹಳ ಪ್ರಮುಖವಾಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಜೀನವ ಶೈಲಿಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆಗುತ್ತಿಲ್ಲ. ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಕಾಣಿಸಿಕೊಳ್ಳುವುದು. ಬಿಳಿ ಕೂದಲು ಅಥವಾ ಬೂದು ಬಣ್ಣದ ಕೂದಲಿನಿಂದ ಸಮಸ್ಯೆಗೆ ಪರಿಹಾರಬೇಕಿದೆ. ಅದಕ್ಕೆ ಕೆಲ ಸುಲಭವಾದ ಟಿಪ್ಸ್ ಗಳನ್ನು ಅನುಸರಿಸಿ
ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಸಲಹೆಗಳನ್ನು ಅನುಸರಿಸುವ ಮೂಲಕ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಕೂದಲು ಉದುರುವಿಕೆಯನ್ನು ಕಡಿಮೆ ಮಾಡಬಹುದು.
ಮೆಹೆಂದಿ ಮತ್ತು ನೆಲ್ಲಿಕಾಯಿ ಬಳಸಿ ಎರಡರ ಮಿಶ್ರಣವು ಸ್ವಲ್ಪ ಮಟ್ಟಿಗೆ ಬೂದು ಕೂದಲನ್ನು ತಡೆಯಲು ಸಹಾಯ ಮಾಡುತ್ತದೆ. ಮೆಹೆಂದಿ ಪೇಸ್ಟ್ ಮಾಡಿ ಮತ್ತು 3 ಟೇಬಲ್ಸ್ಪೂನ್ ನೆಲ್ಲಿಕಾಯಿ ಪುಡಿಯೊಂದಿಗೆ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಕೂದಲಿನ ಆರಂಭದವರೆಗೂ ಚೆನ್ನಾಗಿ ಹಚ್ಚಬೇಕು. ನಂತರ ಅದನ್ನು ಚೆನ್ನಾಗಿ ನೆನೆಸಿ ಶಾಂಪೂ ಬಳಸಿ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಬಿಳಿ ಕೂದಲಿನಿಂದ ದೂರ ಉಳಿಯಬಹುದು.
ಬಾದಾಮಿ ಎಣ್ಣೆ ಮತ್ತು ನೆಲ್ಲಿಕಾಯಿ ರಸವನ್ನು ಮಿಶ್ರಣ ಮಾಡಿ ಮತ್ತು ನೆತ್ತಿಯ ಮೇಲೆ ಹಚ್ಚಿ. ಇದನ್ನು ತಲೆಗೆ ಹಚ್ಚುವುದರಿಂದ ಚಿಕ್ಕ ವಯಸ್ಸಿನಲ್ಲೇ ಬೂದು ಕೂದಲು ಬರದಂತೆ ತಡೆಯುತ್ತದೆ.
ತಲೆ ಸ್ನಾನ ಮಾಡುವುದಕ್ಕಿಂತ 1 ಗಂಟೆ ಮುಂಚೆ ಕೊಬ್ಬರಿ ಎಣ್ಣೆ ಹಾಕಿಕೊಂಡು ತಲೆ ಮಸಾಜ್ ಮಾಡಿಕೊಂಡು ನಂತರ ಸ್ನಾನ ಮಾಡಬೇಕು. ಇದ್ದರಿಂದ ಕೂಡ ಬಿಳಿ ಕೂದಲು ಆಗುವುದನ್ನು ತಡೆಯಬಹುದು.




