ಲೈಫ್ ಸ್ಟೈಲ್
ಸಣ್ಣ ಸಂಗತಿಯನ್ನು ದೊಡ್ಡ ಮಾಡುವುದನ್ನು ಕೈಬಿಡಿ!

ದಂಪತಿಗಳ ಮಧ್ಯೆ ಸರಸದಷ್ಟೇ ವಿರಸವೂ ಮೂಡುವುದು ಸಹಜ. ಇದನ್ನು ಬಗೆಹರಿಸಿಕೊಂಡು ಮುಂದುವರಿದಾಗ ಜೀವನ ಸುಖಮಯವಾಗುತ್ತದೆ.
ಪ್ರತಿ ಜಗಳದ ಬಳಿಕ ನಿರಾಶಾವಾದ ಕಾಡುವುದುಂಟು. ಇದು ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೆಯೂ ಪರಿಣಾಮ ಬೀರುವುದುಂಟು. ಅಂಥ ಸಂದರ್ಭದಲ್ಲಿ ನೀವು ಯಾವ ವಿಷಯದ ಬಗ್ಗೆ ಮಾತನಾಡುವಾಗ ನಿಮ್ಮಿಬ್ಬರ ಮಧ್ಯೆ ವೈಮನಸ್ಸು ಮೂಡುತ್ತದೆ ಎಂಬುದನ್ನು ಕಂಡುಕೊಳ್ಳಿ. ಆ ಸಮಸ್ಯೆಗೆ ಪರಿಹಾರ ಹುಡುಕಿ.
ಕೋಪಗೊಂಡಾಗ ನಿಮ್ಮ ವಿಚಾರವನ್ನು ಸರಿಯಾಗಿ ಅಭಿವ್ಯಕ್ತಪಡಿಸಲು ಸಾಧ್ಯವಿಲ್ಲ ಎಂಬುದನ್ನು ಕಂಡುಕೊಳ್ಳಿ. ಉಸಿರಾಟದ ವ್ಯಾಯಾಮಗಳ ಮೂಲಕ ಸಿಟ್ಟನ್ನು ತಹಬದಿಗೆ ತಂದುಕೊಳ್ಳಿ. ಬಳಿಕ ಸಂಗಾತಿಯ ಜೊತೆ ಕುಳಿತು ಮಾತನಾಡಿ.
ಮಾತಿನ ಮಧ್ಯೆ ಸಂಗಾತಿಯ ಒಳ್ಳೆಯ ಗುಣಗಳನ್ನು ಕೊಂಡಾಡಿ. ಸರಿಯಾದ ಪದಗಳನ್ನು ಸರಿಯಾದ ಜಾಗದಲ್ಲಿ ಬಳಸಲು ಮರೆಯದಿರಿ. ನಯವಾಗಿ ಮಾತನಾಡುವ ಮೂಲಕ ನಂಬಿಕೆ ಹೆಚ್ಚಿಸಿ.




