ಆಹಾರಲೈಫ್ ಸ್ಟೈಲ್
ಮನೆಯಲ್ಲೇ ಮಾಡಿ ಸವಿಯಿರಿ ರಚಿರುಚಿಯಾದ ಹುರಿಗಡಲೆ ಪೇಡಾ

ಬೇಕಾಗುವ ಪದಾರ್ಥಗಳು
• ಹುರಿಗಡಲೆ ಪುಡಿ ಮಾಡಿಟ್ಟುಕೊಂಡಿರುವುದು- ಅರ್ಧಬಟ್ಟಲು
• ಹಾಲು- ಒಂದು ಸಣ್ಣ ಬಟ್ಟಲು
• ತುಪ್ಪ- 1-2 ಚಮಚ
• ಸಕ್ಕರೆ ಪುಡಿ- 1 ಬಟ್ಟಲು
• ಏಲಕ್ಕಿ ಪುಡಿ-ಅರ್ಧ ಚಮಚ
• ಕೇಸರಿ ದಳ- 8-10
ಮಾಡುವ ವಿಧಾನ: ಮೊದಲಿಗೆ ಸಣ್ಣ ಪಾತ್ರೆಯಲ್ಲಿ ತುಪ್ಪ ಹಾಗೂ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಸಕ್ಕರೆ ಸಂಪೂರ್ಣವಾಗಿ ಕರಗಿ ತುಪ್ಪದೊಂದಿಗೆ ಮಿಶ್ರಣಗೊಂಡ ಬಳಿಕ ಹುರಿಗಡಲೆ ಪುಡಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಕಾದ ಹಾಲಿಗೆ 7-10 ಕೇಸರಿ ದಳಗಳನ್ನು ಹಾಕಿಡಬೇಕು. ಬಳಿಕ ಕೇಸರಿ ದಳದಲ್ಲಿ ನೆನೆದ ಹಾಲನ್ನು ಸ್ವಲ್ಪ ಸ್ವಲ್ಪವೇ ಹುರಿಗಡಲೆಗೆ ಹಾಕಿ ಮೃದವಾಗಿ ಹಿಟ್ಟನ್ನು ಮಾಡಿಕೊಳ್ಳಬೇಕು. ನಂತರ ಹಿಟ್ಟಿಗೆ ಸ್ವಲ್ಪ ತುಪ್ಪವನ್ನು ಹಾಕಿ ಪೇಡದ ಆಕಾರಕ್ಕೆ ಮಾಡಿಕೊಂಡು, ಡ್ರೈಫ್ರೂಟ್ಸ್ ನಿಂದ ಅಲಂಕರಿಸಿದರೆ ರುಚಿಕರವಾದ ಹುರಿಗಡಲೆ ಪೇಡಾ ಸವಿಯಲು ಸಿದ್ಧ.




