ಆಹಾರಲೈಫ್ ಸ್ಟೈಲ್
ಹೆಸರು ಬೇಳೆ ಪಾನಕ

ಬೇಕಾಗುವ ಸಾಮಾಗ್ರಿಗಳು
ಹೆಸರುಬೇಳೆ ಅರ್ಧ ಕಪ್
ಬೆಲ್ಲ ಮುಕ್ಕಾಲು ಕಪ್
ತೆಂಗಿನಕಾಯಿ ತುರಿ ಅರ್ಧ ಕಪ್
ಏಲಕ್ಕಿ ಬೀಜ 3
ಬೇಕಾದಷ್ಟು ನೀರು
ಸ್ವಲ್ಪ ನಿಂಬೆರಸ
ತಯಾರಿಸುವ ವಿಧಾನ: ಹೆಸರುಬೇಳೆಯನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ. ಹೆಸರು ಬೇಳೆ ನೆನೆದ ಬಳಿಕ ಬೆಲ್ಲ, ತೆಂಗಿನಕಾಯಿ ತುರಿ, ಏಲಕ್ಕಿ ಬೀಜ ಹಾಗೂ ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣನ್ನು ಜರಡಿಯ ಸಹಾಯದಿಂದ ಸೋಸಿ ಚರಟವನ್ನ ತೆಗೆಯಿರಿ, ಸೋಸಿಕೊಂಡಿರುವ ಪಾನಕಕ್ಕೆ ಕೊಂಚ ನಿಂಬೆ ರಸ ಬೆರೆಸಿ ಕುಡಿಯಿರಿ. ಇದು ನಾಲಿಗೆ ಹಾಗೂ ಆರೋಗ್ಯ ಎರಡಕ್ಕೂ ಅತ್ಯುತ್ತಮ ಪೇಯವಾಗಿದೆ.




