ಲೈಫ್ ಸ್ಟೈಲ್

ಮಕ್ಕಳು ಉದ್ದವಾಗಲು ಈ ಆಸನವೇ ಬೆಸ್ಟ್!

ಪವಿತ್ರಾ ಶೆಟ್ಟಿ

ಬೆಳೆಯುವ ಮಕ್ಕಳು ಉದ್ದವಾಗಲು ನೆರವಾಗುವ ತಾಡಾಸನದ ಬಗ್ಗೆ ನಿಮಗೆ ಎಷ್ಟು ತಿಳಿದಿದೆ. ಇದನ್ನು ಮಾಡುವ ಕ್ರಮ ಹೇಗೆ ಗೊತ್ತೇ?

ಎರಡೂ ಪಾದಗಳ ಮಧ್ಯೆ ಸ್ವಲ್ಪ ಜಾಗ ಬಿಟ್ಟು ನಿಂತುಕೊಳ್ಳಿ. ದೀರ್ಘವಾದ ಉಸಿರನ್ನು ಒಳಗೆ ಎಳೆಯಿರಿ ಮತ್ತು ಎರಡೂ ಕೈಗಳನ್ನು ತಲೆಯ ಮೇಲೆ ಕೊಂಡೊಯ್ಯಿರಿ. ಬೆರಳುಗಳ ಮಧ್ಯೆ ಜಾಗ ಬಿಡದಿರಿ.

ಸಾಧ್ಯವಾದಷ್ಟು ಕೈಗಳನ್ನು ಮೇಲಕ್ಕೆತ್ತಿ. ಕಾಲ್ಬೆರಳುಗಳ ಮೂಲಕ ದೇಹವನ್ನು ಬ್ಯಾಲೆನ್ಸ್ ಮಾಡಿ. ಸ್ವಲ್ಪ ಹೊತ್ತು ಹಾಗೇ ಇರಿ. ಬಳಿಕ ಮತ್ತೆ ಹಿಂಗಾಲುಗಳನ್ನೂ ನೆಲಕ್ಕೆ ಊರಿ.
ಐದರಿಂದ ಹತ್ತು ಬಾರಿ ಹೀಗೆ ಮಾಡುವುದರಿಂದ ಮಕ್ಕಳು ಬಹುಬೇಗ ಉದ್ದವಾಗುತ್ತಾರೆ. ಇದು ಬೆನ್ನು ಮೂಳೆಯನ್ನು ಬಲಪಡಿಸುತ್ತದೆ. ಈ ಆಸನದಿಂದ ಏಕಾಗ್ರತೆಯೂ ಹೆಚ್ಚುತ್ತದೆ. ಕಾಲು, ಸೊಂಟ ಹಾಗೂ ತೊಡೆಗಳು ಗಟ್ಟಿಯಾಗುತ್ತವೆ.

Spread the love

Related Articles

Leave a Reply

Your email address will not be published. Required fields are marked *

Back to top button