ಆರೋಗ್ಯಆಹಾರಲೈಫ್ ಸ್ಟೈಲ್

ಗೋಡಂಬಿ ಸೇವನೆಯ ಲಾಭಗಳಿವು

ಪವಿತ್ರ

ಗೋಡಂಬಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇದನ್ನು ಹಸಿಯಾಗಿಯೂ, ಹುರಿದೂ, ತಿಂಡಿ ತಿನಿಸುಗಳಲ್ಲಿ ಬೆರೆಸಿದರೂ ಇದರ ರುಚಿ ಸರ್ವ ಜನಪ್ರಿಯವೇ ಹೌದು. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು.

ಗೋಡಂಬಿ ಸೇವನೆಯಿಂದ ಜೀರ್ಣಕ್ರಿಯೆ ಚುರುಕಾಗುತ್ತದೆ. ದೇಹ ತೂಕ ಕಡಿಮೆಯಾಗುತ್ತದೆ. ಹಾಗೆಂದು ಇದನ್ನು ವಿಪರೀತ ಸೇವಿಸುವುದು ಕೂಡಾ ಒಳ್ಳೆಯದಲ್ಲ. ದಿನಕ್ಕೆ ಎಂಟರಿಂದ ಹತ್ತು ಗೋಡಂಬಿ ತಿಂದರೆ ಮಾತ್ರ ಇದರ ಧನಾತ್ಮಕ ಅಂಶಗಳು ನಿಮ್ಮದಾಗುತ್ತವೆ.

ಇದರಿಂದ ನಿಮ್ಮ ತ್ವಚೆಯ ಹೊಳಪೂ ಹೆಚ್ಚುತ್ತದೆ. ಇದರಲ್ಲಿರುವ ವಿಟಮಿನ್ ಇ ಹಾಗೂ ಆಂಟಿ ಆಕ್ಸಿಡೆಂಟ್ ಗುಣ ಮೊಡವೆಗಳು ಬರದಂತೆಯೂ ನೋಡಿಕೊಳ್ಳುತ್ತದೆ. ಗೋಡಂಬಿಯಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಇದ್ದು , ಇದು ಮೂಳೆಗಳನ್ನು ದೃಢಪಡಿಸುತ್ತದೆ ಹಾಗೂ ಹಲ್ಲಿನ ಆರೋಗ್ಯವನ್ನೂ ಕಾಪಾಡುತ್ತದೆ.

ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಗುಣವೂ ಇದಕ್ಕಿದೆ. ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಮೆಗ್ನೀಶಿಯಂ ಪ್ರಮಾಣವೂ ಹೆಚ್ಚುತ್ತದೆ. ಕೂದಲು ಉದುರುವ ಸಮಸ್ಯೆಯೂ ದೂರವಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button