ಆರೋಗ್ಯಆಹಾರಲೈಫ್ ಸ್ಟೈಲ್

ಬದಲಾಗುತ್ತಿರುವ ಋತುವಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಈರುಳ್ಳಿಯನ್ನು ಈ ರೀತಿ ಬಳಸಿ

ಪವಿತ್ರಾ ಶೆಟ್ಟಿ

ಬದಲಾಗುತ್ತಿರುವ ಋತುವಿನಲ್ಲಿ ಶೀತ, ಕೆಮ್ಮು, ಕಫದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ವಿಶೇಷವಾಗಿ ಸೊಳ್ಳೆಗಳ ಭಯವು ಹೆಚ್ಚಾಗಿರುತ್ತದೆ. ಈ ಋತುವಿನಲ್ಲಿ ಸೊಳ್ಳೆಗಳ ಕಡಿತದಿಂದ ಅನೇಕ ರೋಗಗಳು ಹರಡುತ್ತದೆ. ಹಾಗಾಗಿ ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ. ಅದಕ್ಕಾಗಿ ಈರುಳ್ಳಿಯನ್ನು ಸೇವಿಸಿ.

ಸಂಶೋಧನೆಯೊಂದರ ಪ್ರಕಾರ ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಎಂಬ ಫ್ಲೇವೊನೈಡ್ ಗಳಿವೆ. ಇದು ರಕ್ತದಲ್ಲಿನ ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ಈರುಳ್ಳಿ ಕಷಾಯವನ್ನು ಶೀತ , ಕೆಮ್ಮು, ಜ್ವರ ಮುಂತಾದ ಕಾಯಿಲೆಗಳಿಗೆ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ.

ಹಾಗಾಗಿ ಈರುಳ್ಳಿಯ ಜೊತೆಗೆ ಬೆಳುಳ್ಳಿಯನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಸ್ವಲ್ಪ ಸಮಯದ ಬಳಿಕ ಕರಿಮೆಣಸು, ಲವಂಗ, ಶುಂಠಿ ಮತ್ತು ದಾಲ್ಚಿನ್ನಿ ಸೇರಿಸಿ ಚೆನ್ನಾಗಿ ಕುದಿಸಿ. ಅದರ ಬಣ್ಣ ಬದಲಾದಾಗ ಕಷಾಯವನ್ನು ಫಿಲ್ಟರ್ ಮಾಡಿ ತಣ್ಣಗಾಗಿಸಿ ಇದನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕುಡಿಯಿರಿ.

Related Articles

Leave a Reply

Your email address will not be published. Required fields are marked *

Back to top button