ಮದ್ಯಪಾನದ ಜೊತೆ ಇವುಗಳು ಬೇಡ!

ಪವಿತ್ರಾ ಶೆಟ್ಟಿ
ಕೆಲವೊಮ್ಮೆ ಮದ್ಯಪಾನ ಮಾಡುವುದು ಅನಿವಾರ್ಯವಾಗಬಹುದು. ಆರೋಗ್ಯದ ದೃಷ್ಟಿಯಿಂದ ಇದನ್ನು ತಪ್ಪಿಸುವುದು ಒಳ್ಳೆಯದು. ಹೀಗಿದ್ದೂ ಕುಡಿಯಲೇಬೇಕಾದ ಸಂದರ್ಭ ಬಂದಾಗ ಅವುಗಳೊಂದಿಗೆ ಕೆಲವು ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ.
ವೈನ್ ಸೇವಿಸುವಾಗ ಚಾಕಲೇಟ್ ಅನ್ನು ತಪ್ಪಿಯೂ ತಿನ್ನದಿರಿ. ಇದು ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೆಚ್ಚಿಸುತ್ತದೆ ಹಾಗೂ ಜೀರ್ಣ ಸಂಬಂಧಿ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ವೈನ್ ಅಥವಾ ಇತರ ಯಾವುದೇ ಮದ್ಯಪಾನ ಮಾಡಿದ ಬಳಿಕ ಊಟ ಮಾಡುವ ಸಂದರ್ಭದಲ್ಲಿ ತರಕಾರಿಗಳ ಪೈಕಿ ಬೀನ್ಸ್ ಹಾಗೂ ದ್ವಿದಳ ಧಾನ್ಯಗಳನ್ನು ಸೇವಿಸದಿರಿ. ಕಬ್ಬಿಣಾಂಶ ಹೆಚ್ಚಿರುವ ಆಹಾರಗಳು ಆಲ್ಕೋಹಾಲ್ ನೊಂದಿಗೆ ಸೇರಿಕೊಳ್ಳುವುದಿಲ್ಲ.
ಆಲ್ಕೋಹಾಲ್ ಸೇವನೆ ಮಾಡುವಾಗ ಹುರಿದ ಆಹಾರ ಅಂದರೆ ಚಿಪ್ಸ್ ಇಲ್ಲವೇ ಮಸಾಲೆಭರಿತ ಗೋಡಂಬಿಯನ್ನು ಜನ ತಿನ್ನುತ್ತಾರೆ. ಇದರಿಂದಲೂ ಸಮಸ್ಯೆಗಳು ಹೆಚ್ಚು. ಇವುಗಳ ಸೇವನೆಯಿಂದ ದೇಹದಲ್ಲಿ ನೀರಿನ ಪ್ರಮಾಣ ಮತ್ತಷ್ಟು ಕಡಿಮೆಯಾಗುತ್ತದೆ.
ಆಲ್ಕೋಹಾಲ್ ನೊಂದಿಗೆ ಬ್ರೆಡ್ ತಿನ್ನುವುದು ಕಾಫಿ ಕುಡಿಯುವುದು ಮೊದಲಾದ ಅಭ್ಯಾಸಗಳನ್ನು ಬಿಟ್ಟುಬಿಡಿ. ಇದರಿಂದ ವಾಂತಿಯಂತ ಲಕ್ಷಣಗಳು ಕಾಣಿಸಿಕೊಳ್ಳಬಹುದು.




