ತುರಿಕೆ ದೂರ ಮಾಡಲು ಇದೇ ಮನೆಮದ್ದು

ಪವಿತ್ರಾ ಶೆಟ್ಟಿ
ಮಳೆಗಾಲದಲ್ಲಿ ತುರಿಕೆ ಸಮಸ್ಯೆ ಕಂಡುಬರುವುದು ಸಾಮಾನ್ಯ. ಇದರ ನಿವಾರಣೆಗೆ ಕ್ರೀಮ್ ಹಚ್ಚುವ ಬದಲು ಈ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.
ಹುಳ ಇಲ್ಲವೇ ಕೀಟ ಕಚ್ಚಿದ ಪರಿಣಾಮ ವಿಪರೀತ ತುರಿಕೆ ಇದ್ದರೆ ಆ ಜಾಗಕ್ಕೆ ಟೊಮೆಟೊ ರಸ ಹಾಗೂ ತಾಜಾ ತೆಂಗಿನಕಾಯಿ ಹಾಲಿನ ಮಿಶ್ರಣದಿಂದ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ತುರಿಕೆ ಸಮಸ್ಯೆ ದೂರವಾಗುತ್ತದೆ.
ಶ್ರೀ ಗಂಧದ ಕೋಡನ್ನು ತಳೆಯಿರಿ. ಇದನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿ. ಅಡುಗೆ ಸೋಡಾ ಮತ್ತು ನಿಂಬೆರಸವನ್ನು ಬೆರೆಸಿದ ಮಿಶ್ರಣದಿಂದ ಆ ಜಾಗವನ್ನು ತೊಳೆಯಿರಿ. ಇದರಿಂದಲೂ ತುರಿಕೆ ದೂರವಾಗುತ್ತದೆ.
ಸಾಂಬಾರ್ ಮಾಡಲೆಂದು ಬೇಳೆ ಬೇಯಿಸಿದ್ದೀರಾ? ಅದರಿಂದ ಎರಡು ಚಮಚ ದಾಲ್ ತೆಗೆದು ಅದಕ್ಕೆ ಮೊಸರು ಬೆರೆಸಿ ತುರಿಕೆ ಹಾಗೂ ನೋವಿರುವ ಜಾಗಕ್ಕೆ ಹಚ್ಚಿದರೂ ಎರಡು ದಿನದಲ್ಲಿ ಎಲ್ಲವೂ ಕಡಿಮೆಯಾಗುತ್ತದೆ.
ಜೀರಿಗೆ ಕುದಿಸಿದ ನೀರನ್ನು ಸ್ನಾನದ ನೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ತುರಿಕೆ ದೂರವಾಗುತ್ತದೆ. ಚಳಿಗೆ ದೇಹ ಒಡೆದು ತುರಿಕೆ ಕಾಣಿಸಿಕೊಂಡಿದ್ದರೆ ಮೊಸರನ್ನು ಇಡೀ ದೇಹಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಉಜ್ಜಿ. ಬಳಿಕ ಸ್ನಾನ ಮಾಡಿ.




