ಆರೋಗ್ಯಲೈಫ್ ಸ್ಟೈಲ್

ತುರಿಕೆ ಸಮಸ್ಯೆಗೆ ಮನೆಯಲ್ಲೇ ಕ್ರೀಮ್ ತಯಾರಿಸಿ

ಪವಿತ್ರಾ ಶೆಟ್ಟಿ

ಕೆಲವರಿಗೆ ಮಳೆಗಾಲದಲ್ಲಿ ಪಾದದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಇದು ಕೆಲವರಿಗೆ ಬೇಸಿಗೆಯಲ್ಲಿ ಹೆಚ್ಚಾಗಿ ಶೂ ಇಲ್ಲವೇ ಸಾಕ್ಸ್ ಧರಿಸುವುದರಿಂದಲೂ ಕಾಣಿಸಿಕೊಳ್ಳುತ್ತದೆ. ಇದು ಹೆಚ್ಚಾದರೆ ಸೋಂಕು ಕಾಣಿಸಿಕೊಳ್ಳಬಹುದು. ಇದನ್ನು ನಿವಾರಿಸುವ ಕ್ರೀಮ್ ಒಂದನ್ನು ಮನೆಯಲ್ಲೇ ತಯಾರಿಸಬಹುದು.

ಎರಡು ಚಮಚ ಅಲೋವೇರಾ ಜೆಲ್ ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ತೆಂಗಿನೆಣ್ಣೆ ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ 2-3 ಚಮಚ ಆಲಿವ್ ಆಯಿಲ್ ಸೇರಿಸಿ. ಕೊನೆಗೆ ಪುದಿನಾ ಎಲೆಯ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ ಪೆಟ್ರೋಲಿಯಂ ಜೆಲ್ಲಿ ಸೇರಿಸಿ.

ಈ ಮಿಶ್ರಣವನ್ನು ಗಾಳಿಯಾಡದ ಡಬ್ಬಿಗೆ ವರ್ಗಾಯಿಸಿ, ಮುಚ್ಚಿಡಿ. ಪಾದದಲ್ಲಿ ತುರಿಕೆ, ಕಿರಿಕಿರಿ ಇದ್ದಾಗ ಈ ಕ್ರೀಮ್ ಅನ್ನು ಆ ಭಾಗಕ್ಕೆ ಹಚ್ಚಿ. ಮಸಾಜ್ ಮಾಡಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿದರೆ ತುರಿಕೆ ಕಡಿಮೆಯಾಗುತ್ತದೆ.

ಅಲೋವೇರಾ ತ್ವಚೆಯನ್ನು ಮೃದುವಾಗಿಸಿದರೆ ತೆಂಗಿನೆಣ್ಣೆ ತುರಿಕೆಗೆ ಕಾರಣವಾದ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಆಲಿವ್ ಅಯಿಲ್ ನಲ್ಲಿರುವ ಆಂಟಿ ಮೈಕ್ರೋಬಿಯಲ್ ಗುಣ ತುರಿಕೆಯನ್ನು ಕಡಿಮೆ ಮಾಡುತ್ತದೆ. ಪುದೀನಾ ಎಣ್ಣೆ ತ್ವಚೆಯನ್ನು ತಂಪಾಗಿಡುತ್ತದೆ ಹಾಗೂ ಪೆಟ್ರೋಲಿಯಂ ಜೆಲ್ಲಿ ಕೂಡಾ ತ್ವಚೆಯನ್ನು ಮೃದುವಾಗಿಡಲು ನೆರವಾಗುತ್ತದೆ

Related Articles

Leave a Reply

Your email address will not be published. Required fields are marked *

Back to top button