ಆರೋಗ್ಯಆಹಾರಲೈಫ್ ಸ್ಟೈಲ್

Drinking Water: ಯಾವ ಹೊತ್ತಿನಲ್ಲಿ ನೀರು ಕುಡಿಯಬಾರದು?

ಪವಿತ್ರಾ ಶೆಟ್ಟಿ

ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನಷ್ಟು ನೀರು ಕುಡಿಯುವುದು ಬಹಳ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಆದರೆ ಈ ಕೆಲವು ವಸ್ತುಗಳನ್ನು ಸೇವಿಸಿದ ಬಳಿಕ ನೀರು ಕುಡಿಯದೆ ಇರುವುದು ಒಳ್ಳೆಯದು ಎನ್ನಲಾಗಿದೆ. ಅವುಗಳು ಯಾವುವು ಎಂದರೆ…

ಕಲ್ಲಂಗಡಿ ಹಣ್ಣು ತಿಂದಾಕ್ಷಣ ನೀರು ಕುಡಿಯಬಾರದು. ಇದರಲ್ಲಿ ಸಾಕಷ್ಟು ಪ್ರಮಾಣದ ನೀರಿನಂಶ ಇರುವುದರಿಂದ ಮತ್ತೆ ನೀರು ಕುಡಿದಾಕ್ಷಣ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಉಂಟಾಗಬಹುದು ಇಲ್ಲವೇ ಅಜೀರ್ಣದ ಲಕ್ಷಣ ಕಂಡುಬಂದೀತು.

ಅದೇ ರೀತಿ ಬಾಳೆಹಣ್ಣು ತಿಂದು ನೀರು ಕುಡಿದರೂ ಅಜೀರ್ಣದ ಲಕ್ಷಣಗಳು ಕಂಡು ಬರುತ್ತವೆ. ನೆಲಕಡಲೆ ತಿಂದ ತಕ್ಷಣ ನೀರು ಕುಡಿಯುವುದರಿಂದ ಕಡಲೆಯಲ್ಲಿರುವ ಕೊಬ್ಬಿನ ಅಂಶಗಳು ನೀರಿನೊಂದಿಗೆ ಸೇರಿ ಕೊಬ್ಬಾಗಿ ಬದಲಾಗುತ್ತದೆ. ಪರಿಣಾಮ ಕೆಮ್ಮು ಇಲ್ಲವೇ ಗಂಟಲಿನಲ್ಲಿ ಕಿಚ್ ಕಿಚ್ ಕಾಣಿಸಿಕೊಳ್ಳುತ್ತದೆ.

ಕಿತ್ತಳೆ ಮುಸುಂಬಿ ಹಣ್ಣುಗಳನ್ನು ಸೇವಿಸಿದ ಬಳಿಕ ನೀರು ಕುಡಿದರೆ ಗ್ಯಾಸ್ಟ್ರಿಕ್ ಹೆಚ್ಚುತ್ತದೆ. ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಲು ಕುಡಿದ ಕೂಡಲೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button