ಆರೋಗ್ಯಲೈಫ್ ಸ್ಟೈಲ್
Curry Leaves: ಕರಿಬೇವು ಸೇವನೆ ಏಕೆ ಮಾಡಬೇಕು?

ಪವಿತ್ರಾ
ಹಸಿಯಾಗಿದ್ದರೂ ಒಣಗಿದ್ದರು ಹಲವು ಬಗೆಯ ಪೋಷಕಾಂಶಗಳನ್ನು ತನ್ನೊಡಲೊಳಗೆ ಸಂಗ್ರಹಿಸಿ ಇಟ್ಟುಕೊಂಡಿರುವ ಕರಿಬೇವಿನ ಸೊಪ್ಪಿನ ಸೇವನೆಯಿಂದ ಹಲವು ಲಾಭಗಳನ್ನು ನೀವು ಪಡೆದುಕೊಳ್ಳಬಹುದು.
ನಾರಿನ ಅಂಶದೊಂದಿಗೆ ಹಲವು ಬಗೆಯ ಪ್ರೊಟೀನ್ ಗಳು ಹಾಗೂ ವಿಟಮಿನ್ ಗಳನ್ನು ಒಳಗೊಂಡಿರುವ ಕರಿಬೇವಿನ ಸೊಪ್ಪಿಗೆ ದೇಹ ತೂಕ ಕಡಿಮೆ ಮಾಡುವ ಗುಣವೂ ಇದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತಂದು ದೇಹದ ಆರೋಗ್ಯವನ್ನು ಕಾಪಾಡುತ್ತದೆ.
ಇದು ದೇಹದಲ್ಲಿ ಏರಿಕೆಯ ಪ್ರಮಾಣದಲ್ಲಿರುವ ಮಧುಮೇಹವನ್ನು ನಿಯಂತ್ರಿಸುತ್ತದೆ. ಜೀರ್ಣಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ದೂರಮಾಡುತ್ತದೆ. ಆಜೀರ್ಣತೆ, ವಾಂತಿ ಭೇದಿ ಮೊದಲಾದ ಹಲವು ಸಮಸ್ಯೆಗಳಿಗೆ ಇದರ ಸೇವನೆಯಿಂದ ಪರಿಹಾರ ಕಂಡುಕೊಳ್ಳಬಹುದು.
ಇದನ್ನು ಕಹಿಎಂದು ದೂರವಿಡುವ ಬದಲು ನಿತ್ಯ ಚಟ್ನಿ, ಸಾರು, ಸಲಾಡ್ ಗಳನ್ನು ಇದನ್ನು ಬಳಸಿ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಎರಡು ಸೊಪ್ಪು ಜಗಿದು ತಿಂದು ಒಂದು ಲೋಟ ಬೆಚ್ಚಗಿನ ನೀರು ಕುಡಿದರೆ ಹೊಟ್ಟೆಯ ಯಾವ ಸಮಸ್ಯೆಯೂ ಕಾಣಿಸಿಕೊಳ್ಳುವುದಿಲ್ಲ




