ಹಸಿ-ಬೇಯಿಸಿ ತಿಂದರೂ ಕ್ಯಾಪ್ಸಿಕಮ್ ಒಳ್ಳೆಯದೇ..!

ಪವಿತ್ರಾ ಶೆಟ್ಟಿ
ಕ್ಯಾಪ್ಸಿಕಂ ಎಂದರೆ ನಿಮಗೆ ಇಷ್ಟ ಇಲ್ಲವೇ. ಅದರ ಸೇವನೆಯಿಂದ ಆಗುವ ಪ್ರಯೋಜನಗಳನ್ನು ತಿಳಿದರೆ ಖಂಡಿತ ಇದನ್ನು ಇಷ್ಟಪಡುತ್ತೀರಿ. ಹೆಚ್ಚಾಗಿ ಸಲಾಡ್ ಇಲ್ಲವೇ ಫಾಸ್ಟ್ ಫುಡ್ ತಯಾರಿ ವೇಳೆ ಬಳಸುವ ಕ್ಯಾಪ್ಸಿಕಂ ಅನ್ನು ಹಸಿಯಾಗಿಯೂ ಬೇಯಿಸಿಯೂ ಸೇವಿಸಬಹುದು. ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರಮಾಡುತ್ತದೆ. ಕ್ಯಾನ್ಸರ್ ಕಾರಕ ಅಂಶಗಳನ್ನು ದೇಹದೊಳಗೆ ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ.
ಇದರಲ್ಲಿ ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಇದು ಸಂಧಿವಾತದ ಅಪಾಯವನ್ನು ಕಡಿಮೆ ಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕ್ಯಾಪ್ಸಿಕಂನಲ್ಲಿ ಪೊಟಾಸಿಯಂ ಸಮೃದ್ಧವಾಗಿದ್ದು ಇದು ಹೃದಯದ ರಕ್ಷಣೆ ಮಾಡುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ರಕ್ತದೊತ್ತಡವನ್ನು ಸ್ಥಿರವಾಗಿರುತ್ತದೆ. ರಕ್ತದ ಹರಿವನ್ನು ಸುಧಾರಿಸುವ ಕಾರಣ ಕೂದಲು ಉದುರುವುದನ್ನು ನಿಯಂತ್ರಿಸಲು ಕ್ಯಾಪ್ಸಿಕಂ ಸೇವನೆ ಒಳ್ಳೆಯದು.
ಇನ್ನು ಕ್ಯಾಪ್ಸಿಕಂನಲ್ಲಿ ಬೀಟಾ-ಕ್ಯಾರೋಟಿನ್ ಅಂಶ ಅಧಿಕವಾಗಿರುವುದರಿಂದ ಇದು ದೃಷ್ಟಿ ಸಮಸ್ಯೆಯನ್ನು ದೂರಮಾಡುತ್ತದೆ. ತ್ವಚೆಯ ಮೇಲಿನ ಸುಕ್ಕನ್ನು ದೂರ ಮಾಡಿ ಆಕರ್ಷಕ ತ್ವಚೆಯನ್ನು ನಿಮ್ಮದಾಗಿಸುತ್ತದೆ.




