ಲೈಫ್ ಸ್ಟೈಲ್

ಎದೆ ಹಾಲು ಹೆಚ್ಚಿಸುವ ನೈಸರ್ಗಿಕ ಪದಾರ್ಥಗಳು

ಪವಿತ್ರಾ

ಹುಟ್ಟಿದ ಮಗುವಿಗೆ ಆರು ತಿಂಗಳ ಕಾಲ ಎದೆ ಹಾಲಿನ ಹೊರತಾಗಿ ಬೇರೆ ಏನನ್ನು ಕೊಡಬಾರದು ಎಂದು ವೈದ್ಯರು ಕಡ್ಡಾಯವಾಗಿ ಸೂಚಿಸಿರುತ್ತಾರೆ. ಆದರೆ ಕೆಲವೊಮ್ಮೆ ಮಗು ರಚ್ಚೆ ಹಿಡಿದು ಅಳುವಾಗ ತಾಯಂದಿರಿಗೆ ಮಗುವಿಗೆ ಸಾಕಷ್ಟು ಹಾಲು ಸಿಗುತ್ತಿದೆಯೇ ಎಂಬ ಸಂಶಯ ಕಾಡುತ್ತದೆ. ಇದಕ್ಕೆ ಪರಿಹಾರವೆಂದರೆ ಈ ಕೆಲವು ಆಹಾರ ವಸ್ತುಗಳನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳುವುದು.

ಬೆಳಿಗ್ಗೆ ಗಂಜಿ ಸೇವಿಸುವ ವೇಳೆ ಒಂದು ಚಮಚ ತುಪ್ಪ ಇಲ್ಲವೇ ಎರಡು ಚಮಚ ತೆಂಗಿನ ಎಣ್ಣೆಯನ್ನು ಅದಕ್ಕೆ ಬೆರೆಸಿ ಸೇವಿಸುವುದರಿಂದ ಎದೆಹಾಲು ಸಹಜವಾಗಿ ಹೆಚ್ಚುತ್ತದೆ. ವಿಟಮಿನ್ ಸಿ ಅಂಶ ಹೆಚ್ಚಿರುವ ಕಿತ್ತಳೆ ಹಣ್ಣಿನ ಸೇವನೆಯಿಂದಲೂ ಇದೇ ಲಾಭವನ್ನು ಪಡೆಯಬಹುದು.

ಹಿಂದಿನ ರಾತ್ರಿಯೇ ನೀರಿನಲ್ಲಿ ನೆನೆಸಿಟ್ಟ ಬಾದಾಮಿಯನ್ನು ಮರುದಿನ ಬೆಳಗ್ಗೆ ಸಿಪ್ಪೆ ತೆಗೆದು ಸೇವಿಸಿ. ಮೆಂತೆಯನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಮೆಂತೆ ಬೆರೆಸಿದ ಕೆಲವು ಲೇಖಗಳು ಆಯುರ್ವೇದಿಕ ಮಳಿಗೆಗಳಲ್ಲಿ ಸಿಗುತ್ತವೆ. ಇದರ ಸೇವನೆಯು ಬಹಳ ಒಳ್ಳೆಯದು.

ಉಳಿದಂತೆ ಪಾಲಕ್, ಪುದಿನಾ ಮೊದಲಾದ ಸೊಪ್ಪುಗಳನ್ನು ಧಾರಾಳವಾಗಿ ಸೇವಿಸಿ. ಇವು ದೇಹದಲ್ಲಿ ರಕ್ತದ ಅಂಶಗಳನ್ನು ಹೆಚ್ಚಿಸುವುದರ ಜೊತೆಗೆ ಸಾಕಷ್ಟು ಪ್ರಮಾಣದ ಹಾಲನ್ನು ಉತ್ಪಾದಿಸುತ್ತದೆ. ಇದು ಮಗು ಆರೋಗ್ಯವಾಗಿ ಬೆಳೆಯುವಂತೆಯೂ ಮಾಡುತ್ತದೆ.

Related Articles

Leave a Reply

Your email address will not be published. Required fields are marked *

Back to top button