ಆರೋಗ್ಯಲೈಫ್ ಸ್ಟೈಲ್

ಬಹುಪಯೋಗಿ ಬಾಳೆಹಣ್ಣು

ಪವಿತ್ರಾ

ಬಾಳೆಹಣ್ಣಿನ ಹಲವು ಪ್ರಯೋಜನಗಳ ಬಗ್ಗೆ ನಾವು-ನೀವೆಲ್ಲರೂ ತಿಳಿದಿದ್ದೇವೆ. ಆದರೆ ಇತ್ತೀಚಿನ ಸಂಶೋಧನೆಯೊಂದು ಹೊಸ ಸಂಗತಿಯನ್ನು ಹೊರಹಾಕಿದೆ. ಅದೇನೆಂದಿರಾ,
ಬಾಳೆಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶಗಳಿದ್ದು ಇದು ದೇಹಕ್ಕೆ ಹಲವು ಲಾಭಗಳನ್ನು ಒದಗಿಸುತ್ತದೆ. ಅದರ ಜೊತೆಗೆ ಬಾಳೆ ಹಣ್ಣಿನಲ್ಲಿ ವಿಟಮಿನ್ ಈ ಅಂಶ ಧಾರಾಳವಾಗಿ ಇರುವುದರಿಂದ ಕಣ್ಣುಗಳ ಹಾಗೂ ಲಿವರ್ ನ ಆರೋಗ್ಯ ಸ್ಥಿರವಾಗಿರುತ್ತದೆ.

ದಿನಕ್ಕೊಂದು ಬಾಳೆಹಣ್ಣು ತಿನ್ನುವುದರಿಂದ ಕಣ್ಣುಗಳ ಸಮಸ್ಯೆ ಎಂದೆಂದೂ ನಿಮ್ಮನ್ನು ಕಾಡದು.

ಬಾಳೆಹಣ್ಣು ದೀರ್ಘಕಾಲದ ಹೃದಯ ಸಂಬಂಧಿ ಸಮಸ್ಯೆಗಳನ್ನು ಹಾಗೂ ಮಧುಮೇಹವನ್ನು ದೂರ ಮಾಡುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಬಾಳೆಹಣ್ಣಿನಲ್ಲಿರುವ ಕೆರೋಟಿನ್ ಅಂಶ ಕಣ್ಣುಗಳ ಆರೋಗ್ಯವನ್ನು ಕಾಪಾಡುತ್ತದೆ ಎನ್ನಲಾಗಿದೆ.

ಬಾಳೆಹಣ್ಣಿನ ಮತ್ತೊಂದು ವಿಶೇಷ ಗುಣ ಎಂದರೆ ಇದು ಎಲ್ಲಾ ವಯೋಮಾನದವರಿಗೂ ಸೇವಿಸಲು ಸೂಕ್ತವಾಗಿದೆ. ಮಕ್ಕಳಾದಿಯಾಗಿ ವಯೋವೃದ್ಧರವರೆಗೆ ಪ್ರತಿಯೊಬ್ಬರು ಯಾವುದೇ ಅಡ್ಡಪರಿಣಾಮಗಳನ್ನು ಬೀರದ ಬಾಳೆಹಣ್ಣನ್ನು ದಿನಕ್ಕೊಂದರಂತೆ ಸೇವಿಸಿ, ಅದರ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ

Related Articles

Leave a Reply

Your email address will not be published. Required fields are marked *

Back to top button