ಆರೋಗ್ಯಲೈಫ್ ಸ್ಟೈಲ್
ಮಡಿಕೆಯಲ್ಲಿನ ನೀರು ಕುಡಿಯುವುದು ಒಳ್ಳೆಯದೇ?

ಪವಿತ್ರಾ
ಹಿಂದಿನ ಕಾಲದಲ್ಲಿ ಕುಡಿಯುವ ನೀರನ್ನು ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿಡುತ್ತಿದ್ದರು ಮತ್ತು ಅದನ್ನೇ ಕುಡಿಯುತ್ತಿದ್ದರು. ಇದರಿಂದ ಹಲವು ಆರೋಗ್ಯದ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ?
ಬೇಸಿಗೆಯಿರಲಿ, ಮಳೆಗಾಲವಿರಲಿ ಮಡಕೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದರಿಂದ ಗಂಟಲು ನೋವಿನ ಸಮಸ್ಯೆ ಹತ್ತಿರವೂ ಸುಳಿಯುವುದಿಲ್ಲ. ಶೀತ, ಕೆಮ್ಮು ಹಾಗೂ ಅಸ್ತಮಾ ರೋಗಿಗಳಿಗೂ ಇದು ಒಳ್ಳೆಯದು.
ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿರುವ ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ನೀರನ್ನು ಸಂಗ್ರಹಿಸಿಡುವುದು ಒಳ್ಳೆಯದಲ್ಲ. ಅದರ ಬದಲು ನೀರನ್ನು ಮಣ್ಣಿನ ಪಾತ್ರೆಯಲ್ಲೇ ಇಡಿ. ಈ ನೀರಿನ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ
ಮಡಕೆಯಲ್ಲಿ ಸಂಗ್ರಹಿಸಿದ ನೀರಿನ ಸೇವನೆಯಿಂದ ದೇಹಕ್ಕೆ ಖನಿಜಗಳು ಮತ್ತು ವಿದ್ಯುತ್ಕಾಂತೀಯ ಶಕ್ತಿ ದೊರೆಯುತ್ತದೆ. ಈ ನೀರು ಕುಡಿಯುವುದರಿಂದ ಪದೇ ಪದೇ ಬಾಯಾರಿಕೆಯಾಗುವುದಿಲ್ಲ. ಹೊರಗಿನ ಶಾಖಕ್ಕೆ ನೀರು ಬೆಚ್ಚಗಾಗದೆ ನೀರು ತಣ್ಣಗೆ ಕುಡಿಯುವಾಗ ಹಿತ ಎನಿಸುವಂತೆಯೇ ಇರುತ್ತದೆ.




