ಆರೋಗ್ಯಆಹಾರಲೈಫ್ ಸ್ಟೈಲ್

ಗರಂ ಮಸಾಲೆ ಸೇವಿಸುವುದು ಒಳ್ಳೆಯದೇ!

ಪವಿತ್ರಾ ಶೆಟ್ಟಿ

ಗರಂ ಮಸಾಲೆಗೆ ಅಡುಗೆಮನೆಯಲ್ಲಿ ಮಹತ್ವದ ಸ್ಥಾನವಿದೆ. ಆರೋಗ್ಯದ ದೃಷ್ಟಿಯಿಂದಲೂ ಇದರ ಸೇವನೆಯಿಂದ ಹಲವು ಅನುಕೂಲಗಳಿವೆ. ಇದು ಅಡುಗೆಗೆ ರುಚಿ ಕೊಡುವುದು ಮಾತ್ರವಲ್ಲ ಔಷಧೀಯ ಪ್ರಯೋಜನಗಳನ್ನು ಕೊಡುತ್ತದೆ. ಬೊಜ್ಜು ಕರಗಿಸುತ್ತದೆ.

ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಗರಂ ಮಸಾಲೆಯಲ್ಲಿರುವ ಫೈಬರ್ ಗುಣ ಜೀರ್ಣಕ್ರಿಯೆಗೆ ವೇಗ ನೀಡುತ್ತದೆ. ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತದೆ. ಸೋಂಪು, ಲವಂಗ, ಏಲಕ್ಕಿ ಮೊದಲಾದ ವಸ್ತುಗಳನ್ನು ಬೆರೆಸಿರುವ ಗರಂಮಸಾಲೆ ಆಂಟಿ ಆಕ್ಸಿಡೆಂಟ್ ರೀತಿಯಲ್ಲೂ ಕೆಲಸ ಮಾಡುತ್ತದೆ.

ಹವಾಮಾನ ಬದಲಾದಾಗ ಕಾಡುವ ಶೀತ ಕೆಮ್ಮುವಿನಂಥ ಸಮಸ್ಯೆಗೂ ಗರಂಮಸಾಲೆಯಲ್ಲಿ ಔಷಧವಿದೆ. ಇದನ್ನು ಆಹಾರದಲ್ಲಿ ಸೇವಿಸುವ ಮೂಲಕ ಶೀತವನ್ನು ಕಡಿಮೆ ಮಾಡಿಕೊಳ್ಳಬಹುದು.
ಕೆಲವೊಮ್ಮೆ ವಿಪರೀತ ಮೈ ಕೈ ನೋವು ಕೂರಲು ಮಲಗಲು ಬಿಡದೆ ಕಾಡುತ್ತದೆ. ಇದರ ನಿವಾರಣೆಗೆ ಗರಂ ಮಸಾಲೆ ಸೇವಿಸಿ ಸೋಂಕು ನಿವಾರಕವಾಗಿಯೂ ಗರಂ ಮಸಾಲೆ ಕೆಲಸ ಮಾಡುತ್ತದೆ. ಹಾಗಾಗಿ ಸಲಾಡ್ ತಯಾರಿಸಿ ಸೇವಿಸುವಾಗ ಚಿಟಿಕೆ ಗರಂ ಮಸಾಲೆ ಪುಡಿ ಉದುರಿಸಿಕೊಳ್ಳಲು ಮರೆಯದಿರಿ.

Spread the love

Related Articles

Leave a Reply

Your email address will not be published. Required fields are marked *

Back to top button