ಆರೋಗ್ಯಲೈಫ್ ಸ್ಟೈಲ್
ದಿನಕ್ಕೊಂದು ಲೋಟ ಮಜ್ಜಿಗೆ ಕುಡಿಯಿರಿ

ಪವಿತ್ರಾ ಶೆಟ್ಟಿ
ಸುಸ್ತಾಗಿ ಮನೆಗೆ ಮರಳಿದ ಬಳಿಕ ಲಸ್ಸಿ ಕುಡಿಯುವುದರ ಬದಲು ಒಂದು ಲೋಟ ಮಜ್ಜಿಗೆ ನೀರು ಕುಡಿದು ನೋಡಿ. ಇದರಲ್ಲಿರುವ ಆರೋಗ್ಯದ ಲಾಭಗಳು ಅತ್ಯಧಿಕವಾದುದು ಎಂಬುದು ನಿಮಗೆ ತಿಳಿದಿರಲಿ.
ದಣಿದು ಮನೆಗೆ ಹಿಂದಿರುಗಿದ ಬಳಿಕ ಒಂದು ಲೋಟ ಮಜ್ಜಿಗೆಗೆ ಚಿಟಿಕೆ ಉಪ್ಪು ಬೆರೆಸಿ ಕುಡಿಯಿರಿ. ಹೆಚ್ಚು ಉಪ್ಪು ಬೆರೆಸಿದರೆ ರುಚಿ ಎನಿಸಬಹುದು. ಆದರೆ ಬಾಯಾರಿಕೆ ಕಡಿಮೆಯಾಗುವುದಿಲ್ಲ. ಅದರ ಬದಲು ಚಿಟಿಕೆ ಉಪ್ಪು ಮಾತ್ರ ಸೇರಿಸಿ ಕುಡಿಯಿರಿ.
ಯಾವ ಕೋಲ್ಡ್ ಡ್ರಿಂಕ್ ಕೂಡಾ ಕೊಡದ ಪ್ರಯೋಜನವನ್ನು ನಿಮಗೆ ಮಜ್ಜಿಗೆ ಕೊಡುತ್ತದೆ. ಅದರಲ್ಲೂ ಒಗ್ಗರಣೆ ಹಾಕಿದ ಶುಂಠಿ ಹಸಿಮೆಣಸು ಬೆರೆಸಿದ ಮಜ್ಜಿಗೆ ಕುಡಿಯುವ ಮಜಾವೇ ಬೇರೆ.
ನಿತ್ಯ ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಲಬದ್ಧತೆ ದೂರವಾಗುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ತ್ವಚೆಯ ಕಾಂತಿ ವೃದ್ಧಿಯಾಗುತ್ತದೆ. ದೇಹ ತಂಪಾಗಿರುತ್ತದೆ. ಕೀಲು ನೋವಿನಂಥ ಸಣ್ಣ ಪುಟ್ಟ ಸಮಸ್ಯೆಗಳು ನಿವಾರಣೆಯಾಗುತ್ತವೆ.




