Vegetables: ತರಕಾರಿಗಳನ್ನು ಹೀಗೆ ಫ್ರೀಜ್ ಮಾಡಿ

ಪವಿತ್ರಾ ಶೆಟ್ಟಿ
ನಿಮ್ಮ ಮನೆಯಲ್ಲಿ ತಂದ ತರಕಾರಿಗಳು ವಿಪರೀತ ಹೆಚ್ಚಿವೆಯೇ? ಇದನ್ನು ದೀರ್ಘಕಾಲ ಸಂಗ್ರಹಿಸಿಡುವ ಸರಳ ವಿಧಾನ ಇಲ್ಲಿದೆ ಕೇಳಿ.
ಕೆಲವೊಮ್ಮೆ ಉತ್ತಮ ತರಕಾರಿಗಳು ಕೆಲವು ಸೀಸನ್ ಗಳಲ್ಲಿ ಲಭ್ಯವಿರುವುದಿಲ್ಲ. ಅವುಗಳನ್ನು ಫ್ರೀಜ್ ಮಾಡುವ ಮೂಲಕ ನೀವು ಹೆಚ್ಚಿನ ಅವಧಿಗೆ ಸಂಗ್ರಹಿಸಿ ಇಡಬಹುದು.
ಕ್ಯಾರೆಟ್ ಅನ್ನು ನೀವು ಫ್ರೀಜ್ ಮಾಡುವುದಿದ್ದರೆ ಮೊದಲು ಅದನ್ನು ಸ್ವಚ್ಛವಾಗಿ ತೊಳೆದು ಸಣ್ಣ ಹೋಳುಗಳಾಗಿ ಕತ್ತರಿಸಿ. ಬಟ್ಟೆಯಲ್ಲಿ ಹಾಕಿ ಒಣಗಿಸಿ. ಬಳಿಕ ಎರಡು ಚಮಚ ಉಪ್ಪು ಬೆರೆಸಿ ಕುದಿಯುವ ನೀರಿಗೆ ಹಾಕಿ ಸ್ವಲ್ಪ ಹೊತ್ತು ಹಾಗೇ ಬಿಡಿ. ಬಳಿಕ ಸೋಸಿ. ಇದನ್ನು ಗಾಜಿನ ಬಟ್ಟಲಿಗೆ ಹಾಕಿ ಐಸ್ ಕ್ಯೂಬ್ ತುಂಬಿ. ಸರಿಯಾಗಿ ಒಣಗುವ ತನಕ ಇದನ್ನೇ ಪುನರಾವರ್ತಿಸಿ. ಬಳಿಕ ಜಿಪ್ ಲಾಕ್ ಇರುವ ಚೀಲಕ್ಕೆ ತುಂಬಿ. ಮುಚ್ಚುವ ವೇಳೆ ಬ್ಯಾಗ್ ಒಳಗೆ ಗಾಳಿಯ ಅಂಶವಿಲ್ಲ ಎಂಬುದನ್ನು ದೃಢಪಡಿಸಿಕೊಳ್ಳಿ.
ಕೊನೆಗೆ ಇದನ್ನು ಫ್ರೀಜರ್ ನಲ್ಲಿಡಿ. ತಿಂಗಳ ತನಕ ಹಾಳಾಗದ ಇವುಗಳನ್ನು ಬೇಕಿರುವಾಗ ಹೊರತೆಗೆದು ಬಳಸಿ. ಇದೇ ವಿಧಾನದಲ್ಲಿ ನೀವು ಬಟಾಣಿ, ಬೀನ್ಸ್ ಮತ್ತಿತರ ತರಕಾರಿಗಳನ್ನೂ ಫ್ರೀಜ್ ಮಾಡಬಹುದು




