ಹಿಮದಲ್ಲಿ ಆಡಲು ಬಯಸುವ ಮಕ್ಕಳ ಆಸೆ ಈಡೇರಿಸಲು ಬೆಂಗಳೂರಿನ ಸ್ನೋ ಸಿಟಿಗೆ ಬನ್ನಿ

– ಪವಿತ್ರಾ
ಹಿಮದಲ್ಲಿ ಆಟವಾಡುವುದೆಂದರೆ ಎಲ್ಲರಿಗೂ ತುಂಬಾ ಇಷ್ಟ. ಅದರಲ್ಲೂ ಮಕ್ಕಳು ಇದನ್ನು ತುಂಬಾನೆ ಇಷ್ಟಪಡುತ್ತಾರೆ. ಆದರೆ ಹಿಮದಲ್ಲಿ ಆಟವಾಡಲು ನಾವು ಹಿಮಾಲಯಕ್ಕೆ ಹೋಗಬೇಕಾಗುತ್ತದೆ. ಆದರೆ ಈ ಕೊರೊನಾ ಸಮಯದಲ್ಲಿ ಅಷ್ಟೊಂದು ದೂರ ಹೋಗುವುದು ತುಂಬಾ ಕಷ್ಟ ಹಾಗಾಗಿ ಹಿಮದಲ್ಲಿ ಆಟವಾಡುವಂತಹ ನಿಮ್ಮ ಮಕ್ಕಳ ಬಯಕೆಗಳನ್ನು ಈಡೇರಿಸಲು ಬೆಂಗಳೂರಿನ ಸ್ನೋ ಸಿಟಿಗೆ ಬನ್ನಿ.
ಬೆಂಗಳೂರಿನ ಜೆಸಿ ನಗರದಲ್ಲಿರುವ ಸ್ನೋ ಸಿಟಿ ನಿಮಗೆ ಹಿಮಪಾತದ ಅನುಭವವನ್ನು ನೀಡುತ್ತದೆ. ಇಲ್ಲಿ ಜನರು ಹಿಮದಲ್ಲಿ ಆಟವಾಡಬಹುದು. ಈ ಥೀಮ್ ಪಾರ್ಕ್ 12,500 ಚದರ ಅಡಿ ವಿಸ್ತೀರ್ಣದಲ್ಲಿದೆ. ಇದು ವರ್ಷಪೂರ್ತಿ ತೆರೆದಿರುತ್ತದೆ. ಜನರು ಯಾವಾಗ ಬೇಕಾದರೂ ಇಲ್ಲಿಗೆ ಭೇಟಿ ನೀಡಬಹುದು. ಅಲ್ಲದೇ ಅಲ್ಲಿ ಧರಿಸಲು ಜಾಕೆಟ್, ಬೂಟುಗಳು, ಹ್ಯಾಂಡ್ ಗ್ಲೌಸ್ ಅನ್ನು ಅಲ್ಲಿ ನೀಡಲಾಗುತ್ತದೆ.
ಇಲ್ಲಿ ಹಿಮದಾಟದ ಜೊತೆಗೆ ಅನೇಕ ಮನರಂಜನಾ ಆಟಗಳು, ಕಾರ್ಯಕ್ರಮಗಳು ಇರುತ್ತದೆ. 9ಡಿ ಸಿನಿಮಾ, ಮಕ್ಕಳು ಮತ್ತು ವಯಸ್ಕರ ಮನಸೆಳೆಯುವ ಅತ್ಯಾಕರ್ಷಕ ಆಟಗಳನ್ನು ಇಲ್ಲಿ ಕಾಣಬಹುದು.
ಸ್ನೋ ಸಿಟಿ ಬೆಂಗಳೂರಿನ ಹೃದಯಭಾಗದಲ್ಲಿದೆ. ಇದು ಬೆಂಗಳೂರಿನ ವಿಮಾನ ನಿಲ್ದಾಣದಿಂದ ಸುಮಾರು 32.5ಕೀ.ಮೀ ದೂರದಲ್ಲಿದೆ. ಹಾಗೇ ಕಾರು, ಕ್ಯಾಬ್, ವ್ಯಾನ್ ವಾಹನಗಳ ಮೂಲಕ ಕೂಡ ಇಲ್ಲಿಗೆ ಪ್ರಯಾಣಿಸಬಹುದು. ಬಸ್ ನಲ್ಲಿ ಸಾಗಲು 44 ನಿಮಿಷ ಬೇಕಾಗುತ್ತದೆ




