ಆಹಾರಲೈಫ್ ಸ್ಟೈಲ್
ಬೆಳಗಿನ ತಿಂಡಿಗೆ ಮಾಡಿ ರುಚಿಯಾದ ತೆಂಗಿನಕಾಯಿ ದೋಸೆ

ಬೇಕಾಗುವ ಪದಾರ್ಥಗಳು
ಅಕ್ಕಿ- 2 ಬಟ್ಟಲು
ಮೆಂತ್ಯೆ- 1 ಚಮಚ
ತೆಂಗಿನ ಕಾಯಿ ತುರಿ- 1 ಬಟ್ಟಲು
ಅವಲಕ್ಕಿ- 1 ಬಟ್ಟಲು
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ: ಪಾತ್ರೆಯೊಂದರಲ್ಲಿ ಅಕ್ಕಿ ಹಾಗೂ ಮೆಂತ್ಯೆಯನ್ನು ತೊಳೆದು ಸುಮಾರು ನಾಲ್ಕು ಗಂಟೆಗಳ ಕಾಲ ನೆನೆಸಿಡಿ. ಐದು ನಿಮಿಷಗಳ ಕಾಲ ಅವಲಕ್ಕಿಯನ್ನು ನೆನೆಸಿಡಿ. ಬಳಿಕ ನೆನೆಸಿಟ್ಟ ಅಕ್ಕಿ, ಮೆಂತ್ಯೆ ಹಾಗೂ ಅವಲಕ್ಕಿಗೆ ತೆಂಗಿನಕಾಯಿ ತುರಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಿಕೊಳ್ಳಿ. ಬಳಿಕ ಸುಮಾರು ಎಂಟು ಗಂಟೆಗಳ ಕಾಲ ಬಿಟ್ಟು ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ದೋಸೆ ಹುಯ್ದುಕೊಳ್ಳಿ. ಎರಡು ಕಡೆ ಕೆಂಪಗೆ ಬೇಯಿಸಿದ ಬಳಿಕ ರುಚಿ ರುಚಿಯಾದ ಚಟ್ನಿಯೊಂದಿಗೆ ಸವಿಯಿರಿ.




