Boiling Potatoes: ಆಲೂಗಡ್ಡೆ ಬೇಯಿಸುವ ಟಿಪ್ಸ್

ತರಕಾರಿಗಳ ಬಗ್ಗೆ ಆಲೂಗಡ್ಡೆಯನ್ನು ಹಲವು ಖಾದ್ಯಗಳ ತಯಾರಿಕೆಗೆ ಬಳಸುತ್ತೇವೆ. ಇದೇ ಕಾರಣಕ್ಕೆ ನಾವು ಆಲೂಗಡ್ಡೆಯನ್ನು ಬೇಯಿಸುತ್ತೇವೆ. ಅದನ್ನು ಬೇಯಿಸುವ ಸರಳ ವಿಧಾನಗಳು ಇಲ್ಲಿವೆ.
ಆಲೂಗಡ್ಡೆಯನ್ನು ಬೇಯಿಸುವ ಮೊದಲು ಅದನ್ನು ಸ್ವಚ್ಛವಾಗಿ ತೊಳೆದು ಕೊಳ್ಳುವುದು ಬಹಳ ಮುಖ್ಯ. ಸಿಪ್ಪೆತೆಗೆದು ಬೇಯಿಸುವುದಕ್ಕಿಂತ ಸಿಪ್ಪೆ ಇದ್ದಂತೆ ಅರ್ಧ ಭಾಗಕ್ಕೆ ಕತ್ತರಿಸಿ ಬೇಯಿಸುವುದು ಒಳ್ಳೆಯದು. ಕುದಿಯುವ ಪ್ರಕ್ರಿಯೆಯಲ್ಲಿ ಸಿಪ್ಪೆ ತಾನಾಗಿಯೇ ಬಿಡುತ್ತದೆ. ಇದರಿಂದ ಹಲವು ಪೋಷಕಾಂಶಗಳು ಉಳಿದುಕೊಳ್ಳುತ್ತದೆ.
ದೊಡ್ಡಗಾತ್ರದ ಆಲೂಗಡ್ಡೆಗಳ ಆದರೆ ಅದನ್ನು ಎರಡು ಭಾಗ ಕತ್ತರಿಸಿ ಬೇಯಿಸಲು ಇಡಿ. ಸಣ್ಣದಾಗಿದ್ದರೆ ಕತ್ತರಿಸಬೇಕಿಲ್ಲ. ಆಲೂಗಡ್ಡೆ ಬೇಯಿಸಲು ಕುಕ್ಕರ್ ಬಳಸುವುದು ಒಳ್ಳೆಯದು. ನೀರಿಗೆ 1 ಚಮಚ ಉಪ್ಪನ್ನು ಸೇರಿಸಿ 3 ವಿಶಲ್ ಕೂಗಿಸಿದರೆ ಸಾಕು.
ಚೆನ್ನಾಗಿ ಬೆಂದ ಬಳಿಕ ಆಲೂಗಡ್ಡೆಯನ್ನು ತಣ್ಣಗಿನ ನೀರಿನಲ್ಲಿ ಹಾಕಿಡಿ. ಇದರಿಂದ ಸಿಪ್ಪೆ ತೆಗೆಯುವುದು ಸುಲಭವಾಗುತ್ತದೆ.
ಆಲೂಗಡ್ಡೆಯಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ ಇರುವುದರಿಂದ ಇದನ್ನು ಹಿತ ಮಿತವಾಗಿ ಸೇವಿಸುವುದು ಒಳ್ಳೆಯದು.




