ಮುಖದ ಪಫಿನೆಸ್ ಕಡಿಮೆ ಮಾಡಲು ನಟಿ ತಮನ್ನಾ ನೀಡಿದ್ದಾರೆ ಈ ಸಲಹೆ

ಸ್ಟಾರ್ ನಟಿಯರ ಸೌಂದರ್ಯ ರಹಸ್ಯವನ್ನು ತಿಳಿಯಲು ಅಭಿಮಾನಿಗಳು ಯಾವಾಗಲೂ ಕುತೂಹಲದಿಂದಿರುತ್ತಾರೆ. ಹಾಗಾಗಿ ಇದೀಗ ನಟಿ ತಮನ್ನಾ ಅವರು ಅಭಿಮಾನಿಗಳಿಗೆ ಬ್ಯೂಟಿ ಸಿಕ್ರೇಟ್ ವೊಂದನ್ನು ತಿಳಿಸಿದ್ದಾರೆ. ಬೆಳಿಗ್ಗಿನ ಮುಖದ ಪಫಿನೆಸ್ ಅನ್ನು ನಿವಾರಿಸಲು ಕೆಲವು ಸಲಹೆಯನ್ನು ನೀಡಿದ್ದಾರೆ.
ನಟಿ ತಮನ್ನಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ಬೆಳಿಗ್ಗಿನ ವೇಳೆ ತಮ್ಮ ಮುಖದ ಪಫಿನೆಸ್ ಅನ್ನು ನಿವಾರಿಸುವುದು ಹೇಗೆಂಬುದನ್ನು ತಿಳಿಸಿದ್ದಾರೆ. ಇದು ಅವರಿಗೆ ತ್ವರಿತ ಪರಿಹಾರವನ್ನು ನೀಡುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ತಮನ್ನಾ ಅತಿಯಾಗಿ ನಿದ್ರೆ ಮಾಡುತ್ತಾರಂತೆ ಅದಕ್ಕಾಗಿ ಅವರ ಮುಖ ಬೆಳಿಗ್ಗೆ ಊದಿಕೊಂಡಿರುತ್ತದೆಯಂತೆ. ಅದಕ್ಕಾಗಿ ಅವರು ಕೋಲ್ಡ್ ವಾಟರ್ ಮತ್ತು ಮಂಜುಗಡ್ಡೆ ಹಾಕಿದ ನೀರಿನಲ್ಲಿ ಮುಖವನ್ನು ಮುಳುಗಿಸುತ್ತಾರಂತೆ. ಇದರಿಂದ ಚರ್ಮದ ರಂಧ್ರಗಳು ಮುಚ್ಚುತ್ತವೆಯಂತೆ. ಇದರಿಂದ ಪಫಿನೆಸ್ ಕಡಿಮೆಯಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ತಮನ್ನಾ, ಮುಖ, ಬೆಳಿಗ್ಗೆ, ನಿದ್ರೆ, Thamanna, Face, Morning, Sleep




