ಆಹಾರಲೈಫ್ ಸ್ಟೈಲ್
ಸಿಂಪಲ್ ಅಂಡ್ ಟೇಸ್ಟಿ ಬಾದಾಮಿ ಪೂರಿ

ಬೇಕಾಗುವ ಪದಾರ್ಥಗಳು
ಮೈದಾ ಹಿಟ್ಟು 1 ಬಟ್ಟಲು
ಅಡುಗೆ ಸೋಡಾ ಚಿಟಿಕೆಯಷ್ಟು
ಎಣ್ಣೆ-ಅಗತ್ಯಕ್ಕೆ ತಕ್ಕಷ್ಟು
ಸಕ್ಕರೆ ಒಂದೂವರೆ ಬಟ್ಟಲು
ಮಾಡುವ ವಿಧಾನ
ಮೊದಲಿಗೆ ಮೈದಾ ಹಿಟ್ಟಿಗೆ ಬೇಕಾದಷ್ಟು ನೀರು, ಉಪ್ಪು ಹಾಗೂ ಚಿಟಿಕೆ ಅಡುಗೆ ಸೋಡಾ ಹಾಗೂ 5-6 ಚಮಚ ಬಿಸಿ ಮಾಡಿದ ಎಣ್ಣೆಯನ್ನು ಹಾಕಿಕೊಂಡು ಕಲಸಿಟ್ಟುಕೊಳ್ಳಬೇಕು. ಸುಮಾರು 15 ರಿಂದ 20 ನಿಮಿಷ ಕಲಸಿಟ್ಟ ಮಿಶ್ರಣವನ್ನು ನೆನೆಯಲು ಬಿಡಬೇಕು. ಬಳಿಕ ಪಾತ್ರೆಯೊಂದರಲ್ಲಿ ಸಕ್ಕರೆ ಹಾಗೂ ಒಂದು ಬಟ್ಟಲು ನೀರು ಹಾಕಿ ಪಾಕ ತಯಾರಿಸಿಕೊಳ್ಳಿ. ಬಳಿಕ ನೆನೆಸಿಟ್ಟ ಹಿಟ್ಟನ್ನು ಬಾದಾಮಿ ಪುರಿ ಆಕಾರಕ್ಕೆ ಒತ್ತಿಕೊಂಡು ಬಿಸಿ ಎಣ್ಣೆಗೆ ಹಾಕಿ ಸಣ್ಣ ಉರಿಯಲ್ಲಿ ಕರಿದುಕೊಳ್ಳಬೇಕು. ನಂತರ ಕರಿದುಕೊಂಡಿರುವ ಪೂರಿಗಳನ್ನು ಪಾಕ ಬಿಸಿ ಇರುವಾಗಲೇ ಅದರಲ್ಲಿ ನೆನೆ ಹಾಕಿ 2ರಿಂದ 3 ನಿಮಿಷ ಬಿಟ್ಟು ತೆಗೆಯಬೇಕು. ಬಳಿಕ ಬಾದಾಮಿ ಪೂರಿ ಮೇಲೆ ಹಸಿ ಕೊಬ್ಬರಿ ತುರಿ ಹಾಕಿ ಸವಿಯಿರಿ.




